
ವಿಜಯನಗರ: ರೈತರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಕತ್ತೆಗಳನ್ನು ಕತ್ತೆ ನೀಡಿ ಮತ್ತೆ ಅವರಿಂದಲೇ ಹೆಚ್ಚಿನ ಬೆಲೆಗೆ ಹಾಲು ಖರೀದಿಸುತ್ತಿದ್ದ ಜೆನ್ನಿಮಿಲ್ಕ್ ಕಂಪನಿಯ ವಂಚನೆಗೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ದಾಗಲ್ಬಾಜಿ ಕಂಪನಿಯ ಎಂ.ಡಿ ನೂತಲಪಾಟಿ ಮುರುಳಿ , ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ ಮತ್ತು ಕಂಪನಿಯ ಸೂಪರ್‌ವೈಸರ್ ಸೈಯದ್ ಮಹಮ್ಮದ್ ಗೌಸ್ , ಈ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ದುಡ್ಡು ಕೊಟ್ಟು ಕತ್ತೆ ಖರೀದಿಸಿರುವ ರೈತರು ಆತಂಕದಲ್ಲಿದ್ದು, ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗುತ್ತದೆ, ರೈತರು ತಾಳ್ಮೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ಸೋಮವಾರ ಹೇಳಿದ್ದಾರೆ.






