ಹೈದರಾಬಾದ್: ಮೈದಾನದಲ್ಲಿ ತಮ್ಮ ವೇಗದ ಬೌಲಿಂಗ್ನಿಂದ ಎದುರಾಳಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ( Mohammed Siraj ) ಇದೀಗ ಪೊಲೀಸ್ ಅಧಿಕಾರಿಯಾಗಿ ಸಮಾಜಘಾತುಕರನ್ನು ಸೆದೆಬಡಿಯಲು ಮುಂದಾಗಿದ್ದಾರೆ.

ಸಿರಾಜ್ ಅವರು ತೆಲಂಗಾಣದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ.

ನಿನ್ನೆ ಡಿಜಿಪಿ ಕಚೇರಿಗೆ ತೆರಳಿದ ಸಿರಾಜ್, ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸಿರಾಜ್ ಅವರೊಂದಿಗೆ ಸಂಸದರಾದ ಅನಿಲ್ ಕುಮಾರ್ ಯಾದವ್ ಮತ್ತು ಮೊಹಮ್ಮದ್ ಫಹೀಮುದ್ದೀನ್ ಕೂಡ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಅಂದಹಾಗೆ ಸಿರಾಜ್ ಅವರಿಗೆ ಗ್ರೂಪ್ 1 ಸರ್ಕಾರಿ ಸ್ಥಾನಮಾನ ನೀಡುವುದಾಗಿ ಈ ಹಿಂದೆಯೇ ತೆಲಂಗಾಣ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ತೆಲಂಗಾಣ ಪೊಲೀಸರು ಎಕ್ಸ್ ಖಾತೆಯ ಮೂಲಕ ಮಾಹಿತಿ ನೀಡಿದ್ದು, ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣದ ಡಿಎಸ್ಪಿ ಆಗಿ ನೇಮಿಸಲಾಗಿದ್ದು, ಅವರ ಕ್ರಿಕೆಟ್ ಸಾಧನೆಗಳನ್ನು ಗೌರವಿಸಲಾಗಿದೆ. ಸಿರಾಜ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರೆಸುತ್ತಾರೆ ಮತ್ತು ತಮ್ಮ ಹೊಸ ಪಾತ್ರದಲ್ಲಿ ಅನೇಕರನ್ನು ಪ್ರೇರೇಪಿಸುತ್ತಾರೆ ಎಂದು ತಿಳಿಸಿದ್ದಾರೆ.

ಡಿಎಸ್ಪಿಯಾಗಿ ನೇಮಕವಾಗಿರುವ ಸಿರಾಜ್ ಅವರು ತಿಂಗಳಿಗೆ 1,37,050 ರೂ. ಸಂಬಳ ಪಡೆಯಲಿದ್ದಾರೆ. ಇದರ ಹೊರತಾಗಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿನ ಸಾಧನೆಯ ನಂತರ ತೆಲಂಗಾಣ ಸರ್ಕಾರವು ಸಿರಾಜ್ ಅವರಿಗೆ ಜುಬಿಲಿ ಹಿಲ್ಸ್‌ನಲ್ಲಿ 600 ಚದರ ಅಡಿಯ ಭೂಮಿಯನ್ನು ಮಂಜೂರು ಮಾಡಿದೆ. ಅಂದಹಾಗೆ ಸಿರಾಜ್ ಟಿ20 ವಿಶ್ವಕಪ್ 2024 ವಿಜೇತ ತಂಡದ ಸದಸ್ಯರಾಗಿದ್ದರು.ಟೀಮ್ ಇಂಡಿಯಾಗೆ ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನದಲ್ಲಿ ಸಿರಾಜ್ಗೆ 5 ಕೋಟಿ ರೂ. ಸಿಕ್ಕಿದೆ.

ಸಿರಾಜ್ ಅವರು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವೇಗಿ ಕೂಡ ಹೌದು. ಆರ್ಸಿಬಿ ಪರ ಆಡುವ ಅವರಿಗೆ ಒಂದು ಸೀಸನ್‌ಗೆ 7 ಕೋಟಿ ಸಂಭಾವನೆ ನೀಡಲಾಗುತ್ತದೆ. ಇನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯಲ್ಲಿದ್ದು, ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!