ಹುಲಿ ಮತ್ತು ಸಿಂಹದಂತಹ ಅಪಾಯಕಾರಿ ಪ್ರಾಣಿಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಮೊದಲು ಒಂದು ಬಾರಿಯೂ ಯೋಚಿಸುವುದಿಲ್ಲ. ತಮ್ಮ ಹಸಿವನ್ನು ನೀಗಿಸಲು ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ತಮಗಿಂತ ದೊಡ್ಡ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಸದ್ಯ ಹುಲಿಯ ಹಲ್ಲಿನ ಮಧ್ಯೆ ಮೂಳೆ ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆಗೆಯಲು ವೈದ್ಯರು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.(VIral Video)
ವಿಡಿಯೋದಲ್ಲಿ ಹುಲಿಯು ಯಾವುದೇ ಪ್ರತಿಕ್ರಿಯೆ ಇಲ್ಲದೆ ಮಲಗಿರುವುದನ್ನು ನೋಡಬಹುದು. ಮೇಲ್ನೋಟಕ್ಕೆ ಹುಲಿಯ ಹಲ್ಲಿನಿಂದ ಮೂಳೆಯನ್ನು ತೆಗೆಯುವ ಮುನ್ನ ಅದಕ್ಕೆ ಪ್ರಜ್ಞೆ ತಪ್ಪಲು ಅರಿವಳಿಕೆ ಚುಚ್ಚುಮದ್ದು ನೀಡಿರಬೇಕು ಎಂದೆನ್ನಿಸುತ್ತದೆ. ಪ್ರಾಣಿ ವೈದ್ಯರು ಹುಲಿಯನ್ನು ಪ್ರಜ್ಞಾಹೀನಗೊಳಿಸಿದ ಬಳಿಕ ಸುತ್ತಿಗೆಯ ಸಹಾಯದಿಂದ ಹುಲಿಯ ಹಲ್ಲಿನಲ್ಲಿ ಸಿಲುಕಿದ್ದ ದೊಡ್ಡ ಮೂಳೆಯ ತುಂಡನ್ನು ತೆಗೆಯಲು ಪ್ರಯತ್ನಿಸುವುದನ್ನು ಕಾಣಬಹುದು. ಆದರೆ, ವಿಡಿಯೋ ಯಾವಾಗ ಮತ್ತು ಎಲ್ಲಿಂದ ಎಂಬುದು ಸ್ಪಷ್ಟವಾಗಿಲ್ಲ.
16 ಸೆಕೆಂಡ್ಗಳ ಈ ವಿಡಿಯೋವನ್ನು ಇದುವರೆಗೂ 22 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 17 ಸಾವಿರಕ್ಖೂ ಹೆಚ್ಚು ಮಂದಿ ಮೆಚ್ಚಿಕೊಂಡಿದ್ದು 400ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ವೈದ್ಯರು ಹುಚ್ಚರ ಕೆಲಸ ಮಾಡುತ್ತಿದ್ದಾರೆ, ಹುಲಿಯ ಬಾಯಿಗೆ ಕೈ ಹಾಕುವುದೂ ದೊಡ್ಡ ಕೆಲಸ, ದಂತವೈದ್ಯರು ಮನುಷ್ಯರೊಂದಿಗೆ ಇದೇ ರೀತಿಯ ಕೆಲಸವನ್ನು ಮಾಡುತ್ತಾರೆ, ದೆವ್ವಗಳು ಮನೆ ಕಟ್ಟುವ ಸಾಧನದಿಂದ ದೊಡ್ಡ ಮೂಳೆಯನ್ನು ಹೊರತೆಗೆದಿವೆ, ಈ ಆಘಾತಕಾರಿ ಕೆಲಸವನ್ನು ಹೆಚ್ಚು ನುರಿತ ತಂಡದಿಂದ ಮಾತ್ರ ಮಾಡಬಹುದು, ಕೆಲವರು ಟೈಗರ್‌ನ ಜೀವ ಉಳಿಸಿದ ದಂತವೈದ್ಯರನ್ನು ಶ್ಲಾಘಿಸುತ್ತಾ ಕಾಮೆಂಟ್ ಮಾಡಿದ್ದಾರೆ.