ಬೆಂಗಳೂರು : ಪಿಕಪ್ ಹಾಗೂ ಕಂಟೈನರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಕ್ಲಿನರ್ ನನ್ನು ತಮ್ಮದೇ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಕದ್ರಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಮನ್ಶಿದಬಾನು ಮಾನವೀಯತೆ ಮೆರೆದಿದ್ದಾರೆ.
ಇಂದು ಮುಂಜಾನೆ ಕೆಪಿಟಿ ಬಳಿ ಪಿಕಪ್ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತವಾಗಿತ್ತು, ಈ ವೇಳೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಲೀನರ್ ನನ್ನು ಅದೇ ದಾರಿಯಲ್ಲಿ ಬಂದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಮನ್ಶಿದಬಾನು ರವರು ಕೂಡಲೇ ತಮ್ಮ ಸ್ಕೂಟಿಯಲ್ಲಿ ಎಜೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರದೆ ಮುಂದೆ ಹೋಗುವ ಜನರಲ್ಲಿ ಮಹಿಳೆಯಾಗಿ ತಮ್ಮ ಸ್ಕೂಟಿಯಲ್ಲಿ ಗಾಯಾಳುವನ್ನು ಕೂರಿಸಿಕೊಂಡು ಹೋಗಿ ಆಸ್ಪತ್ರೆಗೆ ಮನ್ ಶಿದಬಾನು ಅವರು ದಾಖಲಿಸಿದ್ದಾರೆ. ಮನ್ ಶಿದಬಾನು ಅವರು ಕರ್ತವ್ಯ ಜೊತೆ ಸಮಯ ಪ್ರಜ್ಞೆ ಮೆರೆದಿರುತ್ತಾರೆ.