ಪುತ್ತೂರು: ಇಲ್ಲಿನ ಮಂಜಲ್ಪಡು ಸುದಾನ ವಸತಿಯುತ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಸಾಯಂಕಾಲ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ವರುಣ್ ಬ್ಯಾಡ್ಮಿಂಟನ್ ಅಕಾಡೆಮಿಯ ವರುಣ್ ಪಿ.ಎಚ್. ಕ್ರೀಡಾಕೂಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ರೀಡೆಯನ್ನು ಮನೋರಂಜನಾ ಆಟವನ್ನಾಗಿ ಪರಿಗಣಿಸದೆ ಅದರಲ್ಲಿ ವಿಶೇಷ ತರಬೇತಿ, ಪರಿಣತಿಯನ್ನು ಪಡೆಯಲು ಶ್ರಮಿಸಬೇಕು. ನಿರಂತರವಾಗಿ ಅಭ್ಯಾಸ ನಿರತರಾಗಬೇಕು. ಯಾವುದೇ ವೃತ್ತಿಯಲ್ಲಿ ಇದ್ದರೂ ಕ್ರೀಡಾಸಕ್ತಿಯನ್ನು ಕೈ ಬಿಡದೆ ಮುಂದುವರಿಸಿದಾಗ ಯಶಸ್ಸು ಸಾಧ್ಯ’ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಆಸ್ಕರ್ ಆನಂದ್ ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಶಾಲಾ ಆಡಳಿತ ಸಮಿತಿ ಸದಸ್ಯ ಸುಶಾಂತ್ ಹಾರ್ವಿನ್, ಶಾಲಾ ಮುಖ್ಯಗುರು ಶೋಭಾ ನಾಗಾರಾಜ್, ಕ್ರೀಡಾ ಮಂತ್ರಿ ಅನಿಖಾ ಯು. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ವಾರ್ಷಿಕ ಕ್ರೀಡಾಕೂಟದಲ್ಲಿ ದೀಪ್ತಿ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಸ್ಫೂರ್ತಿ ತಂಡವು ರನ್ನರ್ಸ್ ಪ್ರಶಸ್ತಿಗೆ ಭಾಜನರಾದರೆ, ಜ್ಯೋತಿ ತಂಡವು ತೃತೀಯ ಹಾಗೂ ಕೀರ್ತಿ ತಂಡ ಚತುರ್ಥ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಆರು ವಿಭಾಗಗಳಲ್ಲಿ ನಡೆದ ಈ ಕ್ರೀಡಾಕೂಟದ ಸಬ್ ಜ್ಯೂನಿಯರ್ ವಿಭಾಗದ ಬಾಲಕರ ವಿಭಾಗದಲ್ಲಿ ಜ್ಯೋತಿ ತಂಡದ ಮಹಮದ್ ಆನಾಸ್ (6ನೇ ತರಗತಿ), ಬಾಲಕಿಯರ ವಿಭಾಗದಲ್ಲಿ ಜ್ಯೋತಿ ತಂಡದ ಕ್ಷಮ ಎಚ್.ಎಸ್. (6ನೇ ತರಗತಿ), ಜ್ಯೂನಿಯರ್ ವಿಭಾಗದ ಬಾಲಕರ ವಿಭಾಗದಲ್ಲಿ ದೀಪ್ತಿ ತಂಡದ ಶಶಾಂಕ್ (8ನೇ ತರಗತಿ), ಬಾಲಕಿಯರ ವಿಭಾಗದಲ್ಲಿ ಸ್ಫೂರ್ತಿ ತಂಡದ ಎ. ಲೋಸಿನಿ (7ನೇ ತರಗತಿ), ಸೀನಿಯರ್ ವಿಭಾಗದ ಬಾಲಕರ ವಿಭಾಗದಲ್ಲಿ ಸ್ಫೂರ್ತಿ ತಂಡದ ವಿಶ್ಲೇಶ್ ಸಿ. ರೈ (10ನೇ ತರಗತಿ), ದೀಪ್ತಿ ತಂಡದ ಗಗನ್ ಎ.ಜಿ (9ನೇ ತರಗತಿ), ಬಾಲಕಿಯರ ವಿಭಾಗದಲ್ಲಿ ದೀಪ್ತಿ ತಂಡದ ಅನಿಖಾ ಯು(10ನೇ ತರಗತಿ) ವೈಯಕ್ತಿಕ ಚಾಂಪಿಯನ್ ಗಳಾಗಿ ಮೂಡಿಬಂದರು.
ಸಹ ಕ್ರೀಡಾಮಂತ್ರಿ ನಿಕೋಲಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ ವಂದಿಸಿದರು.