
ಸುಳ್ಯ: ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಅಧೀನದಲ್ಲಿರುವ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಅಂಡ್ ಸೈನ್ಸ್ ಸಂಸ್ಥೆಯಲ್ಲಿ DMLT ( ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಪದವಿ ಕೋರ್ಸ್ ಪೂರೈಸಿದ ಶಹಿಮಾ ಎಸ್ ಅವರಿಗೆ ಎ.ಒ.ಎಲ್.ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ರವರು ಪದವಿ ಪ್ರಧಾನ ಮಾಡಿದರು.
ಶಹಿಮಾ ಎಸ್ ಅವರು ಸುಳ್ಯ ಗಾಂಧಿನಗರ ನಿವಾಸಿಗಳಾದ ಶಾಮಿಯುಲ್ಲಾ ಮತ್ತು ನಸೀಯಾ ಬೇಗಂ ದಂಪತಿಗಳ ಪುತ್ರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಡೈರೆಕ್ಟೋರೇಟರೇಟ್ ಆಫ್ ಮೆಡಿಕಲ್ ಡೈರೆಕ್ಟರ್ ಡಾ. ಬಿ.ಎಲ್. ಸುಜಾತ ರಾಥೋಡ್,ಎ.ಒ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ. ಆರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಯೋ ಕೆಮಿಸ್ಟ್ರಿ ಉಪನ್ಯಾಸಕಿ ಡಾ. ಶೃತಿ ರೈ ಪಿ ವಿಶ್ವವಿದ್ಯಾಲಯದ ರ್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಕು. ಅಕ್ಷಿತಾ ಪ್ರಾರ್ಥಿಸಿದರು. ಕು. ಅಕ್ಷಿತಾ ಬಿ.ಎಂ ಮತ್ತು ಕು. ವಿಮರ್ಶಾ ಕಾರ್ಯಕ್ರಮ ನಿರೂಪಿಸಿದರು.









