ನವದೆಹಲಿ: ಲೋಕಸಭೆಯಲ್ಲಿ ‘ಒನ್ ನೇಷನ್ ಒನ್ ಎಲೆಕ್ಷನ್’ನಲ್ಲಿ ಮತದಾನ ಮಾಡಲು ತಪ್ಪಿದ 20 ಸಂಸದರಿಗೆ ಬಿಜೆಪಿ ನೋಟಿಸ್ ಕಳುಹಿಸಿದೆ ಎನ್ನಲಾಗಿದೆ.
ಲೋಕಸಭೆಯಲ್ಲಿ ಇಂದು ಒನ್ ನೇಷನ್ ಒನ್ ಎಲೆಕ್ಷನ್(ಒಎನ್‌ಒಇ) ಮಸೂದೆಯನ್ನು ಪರಿಚಯಿಸುವ ಮತದಾನದ ವೇಳೆ ಗೈರುಹಾಜರಾದ ಪಕ್ಷದ 20 ಕ್ಕೂ ಹೆಚ್ಚು ಸಂಸದರಿಗೆ ನೋಟಿಸ್ ಕಳುಹಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸದನದಲ್ಲಿ ಉಳಿಯುವಂತೆ ಈ ಮೊದಲೇ ಸಂಸದರಿಗೆ ಪಕ್ಷ ವಿಪ್ ಜಾರಿ ಮಾಡಿತ್ತು. ಮಂಗಳವಾರ ಲೋಕಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಮಂಡಿಸಲಾಯಿತು. ಇದು ಸಂಸತ್ತಿನ ಕೆಳಮನೆ, ರಾಜ್ಯ ಅಸೆಂಬ್ಲಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ಡಿಸೆಂಬರ್ 12ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು