
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ರ. 90/2016 ರಲ್ಲಿ ದಾಖಲಾದ 465, 468, 471, 420, 379 r/w 34 ಐಪಿಸಿ ಕಲಂಗಳಡಿ ಪ್ರಕರಣದಲ್ಲಿ ಸುಮಾರು ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಪ್ರಿನ್ಸ್ ಟಿ.ಜೆ. ಜೋಶ್ (43) ಬಂಧನಕ್ಕೊಳಗಾಗಿದ್ದಾನೆ.
ತರಂಪಳ್ಳಿ ಮನೆ, ಕುಟ್ಟಿಂಚಾಲ್, ಎರ್ನಾಕುಲಂ ಜಿಲ್ಲೆ, ಕೇರಳ ರಾಜ್ಯ ನಿವಾಸಿಯಾದ ಆರೋಪಿಯನ್ನು ಕೇರಳ ರಾಜ್ಯದ ಕುಟ್ಟಂಪುಝ ಪ್ರದೇಶದಲ್ಲಿ ದಿನಾಂಕ 13-03-2026 ರಂದು ಬಂಧಿಸಲಾಗಿದೆ. ಬಳಿಕ ಮಾನ್ಯ ACJ & JMFC ನ್ಯಾಯಾಲಯ, ಬಂಟ್ವಾಳ (ಸಿ.ಸಿ. ನಂ. 1060/2019) ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ ಎಎಸ್ಪಿ ಯಶ್ ಕುಮಾರ್ ಶರ್ಮಾ, ಐಪಿಎಸ್ ಅವರ ನಿರ್ದೇಶನದಂತೆ, ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪನಿರೀಕ್ಷಕ ಕೃಷ್ಣಕಾಂತ ಕೆ ಹಾಗೂ ಸಿಬ್ಬಂದಿಗಳಾದ ಹೆಡ್ ಕಾನ್ಸ್‌ಟೇಬಲ್ 314 ಸಂತೋಷ್ ಮತ್ತು ಪಿಸಿ 2462 ಶಿವಾನಂದ ಮಡ್ಡಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.









