ಸಚಿವ ಝಮೀರ್ ಅಹ್ಮದ್ ರನ್ನು ಭೇಟಿಯಾದ ಯತ್ನಾಳ್: ಫೋಟೋ ವೈರಲ್
ಬೆಳಗಾವಿ: ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ಮಾತುಕತೆ ನಡೆಸಿರುವ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ಬೆಳಗಾವಿ ಸುವರ್ಣಸೌಧದಲ್ಲಿ ಝಮೀರ್ ಮತ್ತು ಯತ್ನಾಳ್ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದ್ದಾರೆ.
ಸಹಜವಾಗಿ ಯತ್ನಾಳ್ ಹಾಗೂ ಜಮೀರ್ ಅಹಮದ್ ಖಾನ್ ನಡುವೆ ಸದನದಲ್ಲಿ ಜಿದ್ದಾಜಿದ್ದಿಯ ಸಮರ ನಡೆಯುತ್ತಿರುತ್ತದೆ. ವಕ್ಸ್ ವಿಚಾರವಾಗಿ ಶುಕ್ರವಾರ ಸದನದಲ್ಲಿ ನಿಯಮ 69 ರ ಅಡಿಯಲ್ಲಿ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಯತ್ನಾಳ್ ವಕ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಝಮೀರ್ ವಿರುದ್ಧನೂ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಝಮೀರ್ ಕೂಡಾ ಖಡಕ್ಕಾಗಿ ತಿರುಗೇಟು ನೀಡಿದ್ದರು.
ಜಮೀರ್ ಕಚೇರಿಗೆ ಹೋಗಿದ್ದ ಯತ್ನಾಳ್ ಅವರನ್ನು ಪ್ರೀತಿಯಿಂದಲೇ ಭರಮಾಡಿಕೊಂಡ ಜಮೀರ್ ಕಾಫಿ ಕೊಟ್ಟು ಉಪಚರಿಸಿದ್ದಾರೆ. ಬಳಿಕ ಇಬ್ಬರೂ ಗುಟ್ಟಾಗಿ ಮಾತನಾಡಿದ ಫೋಟೋ ಕೂಡಾ ಚರ್ಚೆಗೆ ಗ್ರಾಸವಾಗುತ್ತಿದೆ.