ಪುತ್ತೂರು, ಮಾ.14: ಪುತ್ತೂರಿನ ಶಾಪಿಂಗ್ ಪ್ರಿಯರಿಗೆ ವಿಶೇಷ ಸರ್ಪ್ರೈಸ್‌! ಗೃಹೋಪಯೋಗಿ ವಸ್ತುಗಳ ವಿಶಾಲ ಸಂಗ್ರಹದೊಂದಿಗೆ ‘ನ್ಯೂ ಚೆನ್ನೈ ಶಾಪಿಂಗ್’ ಮೊದಲ ಬಾರಿಗೆ ಪುತ್ತೂರಿನಲ್ಲಿ ಭಾನುವಾರ, ಮಾರ್ಚ್ 15, 2026ರಂದು ಭರ್ಜರಿ ಆರಂಭವಾಗಲಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ ಈ ವಿಶೇಷ ಮೇಳದಲ್ಲಿ ಕೇವಲ ₹180ಕ್ಕೆ ಯಾವುದೇ ಒಂದು ವಸ್ತುವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. “Pick Any Items – ₹180 Only” ಎಂಬ ಆಕರ್ಷಕ ಆಫರ್ ಗ್ರಾಹಕರ ಗಮನ ಸೆಳೆಯುತ್ತಿದೆ.
ಮೇಳದಲ್ಲಿ ಮಕ್ಕಳ ಆಟಿಕೆಗಳು, ಟೆಡ್ಡಿ ಬೇರ್‌ಗಳು, ಗಿಫ್ಟ್ ಐಟಂಗಳು, ಮಹಿಳೆಯರ ಹ್ಯಾಂಡ್ ಬ್ಯಾಗ್‌ಗಳು, ಮಕ್ಕಳ ಸ್ಕೂಲ್ ಬ್ಯಾಗ್‌ಗಳು, ಕಾಲೇಜು ಬ್ಯಾಗ್‌ಗಳು ಸೇರಿದಂತೆ ವಿವಿಧ ಮಾದರಿಯ ಉತ್ಪನ್ನಗಳು ಲಭ್ಯವಿವೆ. ಅಲ್ಲದೆ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಪಾತ್ರೆಗಳು, ಪ್ಲಾಸ್ಟಿಕ್ ಗೃಹೋಪಯೋಗಿ ವಸ್ತುಗಳು, ಗೋಡೆ ಗಡಿಯಾರಗಳು, ಚಪ್ಪಲಿ ಗಳು ಹಾಗೂ ಅನೇಕ ಆಕರ್ಷಕ ಉಡುಗೊರೆ ವಸ್ತುಗಳೂ ಗ್ರಾಹಕರಿಗೆ ಸಿಗಲಿವೆ.
ಕುಟುಂಬ ಸಮೇತರಾಗಿ ಭೇಟಿ ನೀಡಿ, ಕಡಿಮೆ ದರದಲ್ಲಿ ಹೆಚ್ಚಿನ ಆಯ್ಕೆಯೊಂದಿಗೆ ಖರೀದಿ ಮಾಡುವ ಅಪರೂಪದ ಅವಕಾಶವನ್ನು ಶಾಪಿಂಗ್ ಪ್ರಿಯರು ಬಳಸಿಕೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಮಹಾ ಶಾಪಿಂಗ್ ಮೇಳಕ್ಕೆ ಭಾರಿ ಜನಸ್ತೋಮ ಸೇರುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!