ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ತರಗತಿಯೊಂದರೊಳಗೆ ನಾಗರ ಹಾವಿನ ಮರಿ ಕಾಣಿಸಿಕೊಂಡು ವಿದ್ಯಾರ್ಥಿಗಳನ್ನು ಕ್ಷಣಕಾಲ ಬೆಚ್ಚಿಬೀಳಿಸಿದ ಘಟನೆ ಅ.25ರಂದು ನಡೆದಿದೆ. ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮರಿ ನಾಗರ ಕಾಣಿಸಿಕೊಂಡಿದೆ. ಇದರಿಂದ ಭೀತಿಗೊಂಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಒಂದು ಕ್ಷಣ ಏನು ಮಾಡುವುದೆಂದು ತೋಚದೆ ತಬ್ಬಿಬ್ಬಾದರು. ಬಳಿಕ ಸ್ನೇಕ್ ತೇಜಸ್ ಅವರಿಗೆ ಮಾಹಿತಿ ನೀಡಲಾಯಿತು. ಸ್ನೇಕ್ ತೆಜಸ್ ಅವರು ಸ್ಥಳಕ್ಕಾಗಮಿಸಿ ಮರಿ ನಾಗರನನ್ನು ಕೊಂಡೊಯ್ದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ತರಗತಿಯೊಳಗೆ ಎಂಟ್ರಿ ಕೊಟ್ಟ ಮರಿ ನಾಗರರನ್ನು ವಿದ್ಯಾರ್ಥಿಗಳು ಭಯಾಶ್ಚರ್ಯದಿಂದ ವೀಕ್ಷಿಸಿದರೆ, ಕೆಲವರು ತಮ್ಮ ಮೊಬೈಲ್ ನಲ್ಲಿ ಹಾವಿನ ಚಲನವಲನವನ್ನು ಸೆರೆಹಿಡಿದರು.