ನಾವು ನೀವೆಲ್ಲಾ ಬಸ್ ಬುಕ್ ಮಾಡಿದಿವಿ. ಕ್ಯಾಬ್, ರೈಲು ಕೂಡ ಬುಕ್ ಮಾಡಿವಿ. ಆದರೆ ಹೆಲಿಕಾಪ್ಟರ್ ಅನ್ನು ಯಾವಾತ್ತಾದರೂ ಬುಕ್ ಮಾಡಿದಿರಾ? ಮಾಡಿಲ್ಲಾ ಅಂತಾದರೆ ಈ ಸ್ಟೋರಿಯನ್ನು ಕಂಪ್ಲೀಟ್ ಆಗಿ ನೀವು ಓದಲೇಬೇಕು. ಇದರಲ್ಲಿ ನಾವು ಹೆಲಿಕಾಪ್ಟರ್ ಎಲ್ಲಿ? ಎಷ್ಟು ಹಣಕ್ಕೆ ಬುಕ್ ಮಾಡಿ ಆಕಾಶದಲ್ಲಿ ಒಂದು ರೌಂಡ್ ಸುತ್ತಾಡಿಕೊಂಡು ಬರಬಹುದು ಅನ್ನೋದನ್ನು ಹೇಳುತ್ತೇವೆ.
ಹೌದು.. ಬೆಂಗಳೂರಿನ ಜಕ್ಕೂರ್ ಏರೋಡ್ರೋಮ್, ಬಳ್ಳಾರಿ ರೋಡ್‌ನಲ್ಲಿರುವ ಡೆಕ್ಕನ್ ಚಾರ್ಟರ್ಸ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ ಡೆಕ್ಕನ್ ಸಿಂಪ್ಲಿಫ್ಲೈ ಕಂಪನಿಯೊಂದು ಸರ್ಕಾರಿ ಫ್ಲೈಯಿಂಗ್ ಕ್ಲಬ್‌ನಲ್ಲಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ನೀಡುತ್ತದೆ. ಇಲ್ಲಿ ಹೆಲಿಕಾಪ್ಟರ್ ಹಾಗೂ ಜೆಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ನೀವು ಹೇಗೆ ಬಸ್ ಹಾಗೂ ರೈಲನ್ನು ಬುಕ್ ಮಾಡ್ತೀರೋ ಹಾಗೇ ಇಲ್ಲಿ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಬಹುದು. ಇದೇ ಸ್ಥಳದಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಇಲ್ಲೇ ಲ್ಯಾಂಡ್ ಕೂಡ ಆಗುತ್ತದೆ.
ಇಲ್ಲಿ ಒಟ್ಟು 20 ಹೆಲಿಕಾಪ್ಟರ್‌ಗಳು ಇವೆ. ಬೆಂಗಳೂರು ಎರಡು, ಮುಂಬೈ, ದೆಹಲಿ ಹಾಗೂ ಯಾತ್ರೆ ಸ್ಥಳಗಳಿಗೂ ಹೆಲಿಕಾಪ್ಟರ್‌ಗಳು ಇಲ್ಲಿಂದ ಸಾಗುತ್ತವೆ. ಕೇದಾರನಾಥ ಯಾತ್ರೆ ಕೂಡ ಇದರಲ್ಲಿ ಮಾಡಬಹುದು. ಇಲ್ಲಿ ಸ್ಪೆಷಲ್ ಪ್ಲೈಟ್ ಕೂಡ ವ್ಯವಸ್ಥೆ ಇದ್ದು ಇದನ್ನೂ ಕೂಡ ಬುಕ್ ಮಾಡಿಕೊಳ್ಳಬಹುದು. ಇಲ್ಲಿನ ಜೆಟ್‌ಗಳನ್ನು ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಮಾಡಲು ಅವಕಾಶವಿದೆ. ಅಲ್ಲದೆ ಹೆಲಿಕಾಪ್ಟರ್‌ಗಳನ್ನು ಎಲ್ಲಿಬೇಕಾದರೂ ಲ್ಯಾಂಡ್ ಮಾಡಬಹುದು.
ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಎಷ್ಟು ಹಣವಾಗುತ್ತದೆ?
ಹೆಲಿಕಾಪ್ಟರ್ ಗಳಿಗೆ ಗಂಟೆ ಲೆಕ್ಕದಲ್ಲಿ ಹಣ ನೀಡಬೇಕಾಗುತ್ತದೆ. ಇದರಲ್ಲಿ ಕುಳಿತುಕೊಳ್ಳಲು 10 ನಿಮಿಷಕ್ಕೆ 4 ಸಾವಿರ ನೀಡಬೇಕು. 1 ಗಂಟೆಗೆ ಜಿಎಸ್‌ಟಿ ಸೇರಿ ಸರಿಸುಮಾರು ಒಂದುವರೆ ಲಕ್ಷ ನೀಡಬೇಕಾಗುತ್ತದೆ. ಇದರಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಲು ಒಂದುವರೆ ಗಂಟೆ ಸಮಯ ಬೇಕಾಗುತ್ತದೆ. ಮೈಸೂರಿಗೆ 45 ರಿಂದ 50 ನಿಮಿಷದಲ್ಲಿ ಹೋಗಬಹುದು.
ಇದು 250 ಕಿಮೀ ಅನ್ನು ಒಂದು ಗಂಟೆಯಲ್ಲಿ ತಲುಪುತ್ತದೆ. ಕಬಿನಿ, ಮೈಸೂರು, ಗುಲ್ಬರ್ಗ, ಹೈದರಾಬಾದ್ ಎಲ್ಲ ಕಡೆ ಹೆಲಿಕಾಪ್ಟರ್‌ನಲ್ಲಿ ಹೋಗಬಹುದು. ಇದರಲ್ಲಿ ವೈಟಿಂಗ್ ಚಾರ್ಜ್ ಇರುವುದಿಲ್ಲ. ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಹೋಗಲು ಎಷ್ಟು ಹಣ ಪಡೆಯಲಾಗುತ್ತದೆಯೋ ಅಷ್ಟೇ ಹಣ ವಾಪಸ್ ಬರುವಾಗಲು ನೀಡಬೇಕಾಗುತ್ತದೆ. ಅಂದರೆ ಸರಿ ಸುಮಾರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿ ಬರಲು ನಾಲ್ಕರಿಂದ ನಾಲ್ಕುವರೆ ಲಕ್ಷ ನೀಡಬೇಕಾಗುತ್ತದೆ.
ಯಾರೆಲ್ಲಾ ಹೆಲಿಕಾಪ್ಟರ್ ಬುಕ್ ಮಾಡಬಹುದು?
ಹೆಲಿಕಾಪ್ಟರ್ ಹಾಗೂ ಜೆಟ್‌ಗಳನ್ನು ಯಾರು ಬೇಕಾದರೂ ಬುಕ್ ಮಾಡಬಹುದು. ಒಂದು ಹೆಲಿಕಾಪ್ಟರ್ ಸರಿಸುಮಾರು 25 ರಿಂದ 30 ಕೋಟಿ ಬೆಲೆಬಾಳುತ್ತದೆ. ಒಂದು ಹೆಲಿಕಾಪ್ಟರ್‌ನಲ್ಲಿ ಒಬ್ಬ ಪೈಲೆಟ್, ಒಬ್ಬ ಇಂಜಿನೀಯರ್ ಹಾಗೂ ಹಿಂಬದಿಯಲ್ಲಿ ಐದು ಜನ ಕುಳಿತು ಪ್ರಯಾಣ ಮಾಡಬಹುದು.
ವಿಐಪಿಗಳು, ಸೆಲೆಬ್ರಿಟಿಗಳು ಎಲ್ಲರೂ ಇದೇ (ಬೆಂಗಳೂರಿನ ಜಕ್ಕೂರ್ ಏರೋಡ್ರೋಮ್) ಸ್ಥಳದಿಂದಲೇ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಾರೆ. ಜೊತೆಗೆ ಇಲ್ಲಿಯೇ ಬಂದು ಲ್ಯಾಂಡ್ ಆಗುತ್ತಾರೆ. ಚುನಾವಣೆ ಪ್ರಚಾರ, ಇನ್ನಿತರ ಸೆಲೆಬ್ರಿಟಿಗಳ ಪ್ರಚಾರ ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಹೆಲಿಕಾಪ್ಟರ್ ಬೇಕಿದ್ದಲ್ಲಿ ಬೆಂಗಳೂರಿನ ಜಕ್ಕೂರ್ ಏರೋಡ್ರೋಮ್ ನಿಂದಲೇ ಹೆಲಿಕಾಪ್ಟರ್ ಬಾಡಿಗೆ ಪಡೆದು ಹೋಗುತ್ತಾರೆ.
ಅಷ್ಟೇ ಅಲ್ಲ ಜಾಲಿ ರೈಡ್, ಪಬ್ಲಿಕ್ ಮೀಟ್, ಮದುವೆ ಹೀಗೆ ಎಲ್ಲದಕ್ಕೂ ಈ ಹೆಲಿಕಾಪ್ಟರ್ ಬಳಕೆ ಮಾಡಬಹುದು. ಫ್ಲವರ್ ಡ್ರಾಪಿಂಗ್ ಕೂಡ ಇದರಲ್ಲಿ ಮಾಡಲು ಬಾಡಿಗೆಗೆ ಪಡೆಯಬಹುದು. ದೇವಸ್ಥಾನ ಉದ್ಘಾಟನೆ ಇದ್ದರೆ ಪುಷ್ಪಾರ್ಪಣೆ ಮಾಡಲು ಕೂಡ ಈ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತದೆ.
ದೇವಸ್ಥಾನಗಳಿಗೆ ಪುಷ್ಪಾರ್ಚನೆ ಮಾಡಲು ಎಷ್ಟು ಹಣವಾಗುತ್ತದೆ?
ಹೆಲಿಕಾಪ್ಟರ್ ಗಳಿಗೆ ಗಂಟೆ ಲೆಕ್ಕದಲ್ಲಿ ಹಣ ನೀಡಬೇಕಾಗುತ್ತದೆ. ಜಕ್ಕೂರ್‌ಯಿಂದ ಟೇಕ್ ಆಫ್ ಆಗಿ ಬೆಂಗಳೂರಿನ ಯಾವುದೇ ಸ್ಥಳಕ್ಕೆ ಹೋಗಿ ದೇವಸ್ಥಾನದ ಮೇಲೆ ಪುಷ್ಪಾರ್ಚನೆ ಮಾಡಿ ವಾಪಸ್ ಬರಲಿಕ್ಕೆ 1 ಗಂಟೆಗೆ ಜಿಎಸ್‌ಟಿ ಸೇರಿ ಒಂದುವರೆ ಲಕ್ಷ ನೀಡಬೇಕಾಗುತ್ತದೆ.
ದೇವಸ್ಥಾನಕ್ಕೆ ಪುಷ್ಪಾರ್ಚನೆ ಮಾಡಿಸಲು ಮಾತ್ರ ಡಿಸಿ ಆಫೀಸ್‌ಗೆ ಹೋಗಿ ಒಂದು ಪರ್ಮಿಷನ್ ಲೆಟರ್ ತಂದು, ಬಾಡಿಗೆ ಹಣ ಪೇ ಮಾಡಿದರೆ ದೇವಸ್ಥಾನಕ್ಕೆ ಪುಷ್ಪಾರ್ಚನೆ ಮಾಡಲು ಹೆಲಿಕಾಪ್ಟರ್ ಸಿಗುತ್ತದೆ. ದೇವಸ್ಥಾನದ ಮೇಲೆ ಅಥವಾ ಸುತ್ತಲು ಪ್ರದೇಶ ಹೇಗಿದೆ? ಹೈ ಟವರ್ ಇದಿಯಾ? ದೊಡ್ಡ ಬಿಲ್ಡಿಂಗ್ ಇದಿಯಾ ಎಲ್ಲಾ ನೋಡಿಕೊಂಡು ಪರ್ಮಿಷನ್ ಲೆಟರ್ ನೀಡಲಾಗುತ್ತದೆ. ಇದು ಒಂದು ವಾರದ ಕೆಲ ಆಗಿರುತ್ತದೆ.
ಎಲ್ಲಿ ಲ್ಯಾಂಡ್ ಮಾಡಬಹುದು?
ಬೆಂಗಳೂರಿನಿಂದ ಹೊರಟರೆ ಎಲ್ಲಿಬೇಕಾದರೂ ಹೆಲಿಕಾಪ್ಟರ್ ಲ್ಯಾಂಡ್ ಮಾಡಬಹುದು. ಮನೆ ಮುಂದೆ, ಜಮೀನು ಅಥವಾ ಇನ್ನಿತರ ಓಪನ್ ಪ್ಲೇಸ್ ಅಲ್ಲೂ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಬಹುದು. ಆದರೆ ಲ್ಯಾಂಡ್ ಮಾಡಲು ಸ್ಥಳ ಇರಬೇಕು. ಸ್ಥಳೀಯ ಪೊಲೀಸರ ಅನುಮತಿ ಪಡೆದಿರಬೇಕಾಗುತ್ತದೆ. ಲ್ಯಾಂಡ್ ಮಾಡುವ ಸ್ಥಳವನ್ನು ಮೊದಲೇ ಗುರುತಿಸಿರಬೇಕು.
ಹೆಲಿಕಾಪ್ಟರ್ ಯಾವ ಸಮಯದಲ್ಲಿ ಲಭ್ಯವಿರುತ್ತದೆ?
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಎಲ್ಲಿಗೆ ಬೇಕಾದರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಬಹುದು. ಸೂರ್ಯ ಹುಟ್ಟಿದಾಗಿನಿಂದ ಸೂರ್ಯ ಮುಳುಗುವವರೆಗೂ ಮಾತ್ರ ಹೆಲಿಕಾಪ್ಟರ್ ಹಾರಾಟುತ್ತದೆ. ರಾತ್ರಿ ಹೊತ್ತು ಹೆಲಿಕಾಪ್ಟರ್ ಹಾರಾಡುವುದಿಲ್ಲ. ರಾತ್ರಿ ಹಾರಾಡಲು ಪ್ರೈವೇಟ್ ಜೆಟ್ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಹೆಲಿಕಾಪ್ಟರ್ ಅಲ್ಲಿ ಹುಬ್ಬಳ್ಳಿ ಹೋದರೆ ಅಲ್ಲಿಂದ ವಾಪಸ್ ಬರುವುದು ಲೇಟ್ ಆದರೆ ಜೆಟ್ ಬಂದು ಪಿಕ್ ಅಪ್ ಮಾಡುತ್ತದೆ.
ಜೆಟ್ ಪ್ರಯಾಣ ದರ ಎಷ್ಟು?
ಜೆಟ್ ಪ್ರಯಾಣ ದರ ಒಂದು ಗಂಟೆಗೆ ಎರಡುವರೆಯಿಂದ ಮೂರು ಲಕ್ಷ ಆಗುತ್ತದೆ. ಜೆಟ್ ಅಲ್ಲಿ ಎಂಟು ಜನ ಕುಳಿತುಕೊಳ್ಳಬಹುದು. ಜೆಟ್ ಅಲ್ಲಿ ರಾತ್ರಿ ಮತ್ತು ಹಗಲು ಪ್ರಯಾಣ ಮಾಡಬಹುದು. ಜೆಟ್ ಹೆಲಿಕಾಪ್ಟರ್‌ಗಿಂತಲೂ ವೇಗವಾಗಿ ಸಾಗುತ್ತದೆ. ಜೊತೆಗೆ ಜೆಟ್ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಮಾತ್ರ ಪ್ರಯಾಣ ಮಾಡಲಿದೆ. ಹೊಲ, ಕ್ರೀಡಾಂಗಣ ಇಂತೆಲ್ಲಾ ಸ್ಥಳದಲ್ಲಿ ಜೆಟ್ ಲ್ಯಾಂಡ್ ಆಗುವುದಿಲ್ಲ. ಬಾಡಿಗೆ ಪಡೆಯುವ ಜೆಟ್ ಹಾಗೂ ಹೆಲಿಕಾಪ್ಟರ್‌ಗಳನ್ನು ಎಲ್ಲಿಬೇಕಾದರೂ ಲ್ಯಾಂಡ್ ಮಾಡಲು ಅವಕಾಶ ಇದೆ.
ಯಾರೆಲ್ಲಾ ಹೆಲಿಕಾಪ್ಟರ್ ಬುಕ್ ಮಾಡಬಹುದು?
ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳುವ ಹಾಗೂ ಹಾರಾಡುವ ಆಸೆ ಇರುವ ಯಾರು ಬೇಕಾದರೂ ಹೆಲಿಕಾಪ್ಟರ್ ಬುಕ್ ಮಾಡಬಹುದು. ತಂದೆ-ತಾಯಿ, ಹೆಂಡತಿ, ಮಕ್ಕಳ, ಫ್ರೆಂಡ್ಸ್, ಉದ್ಯೋಗಿಗಳು ಜಾಲಿ ರೈಡ್ ಇದರಲ್ಲಿ ಹೋಗಬಹುದು. ಪ್ರವಾಸ ಕೂಡ ಇದರಲ್ಲಿ ಕೈಗೊಳ್ಳಬಹುದು. ಜಾತ್ರೆಗೂ ಕೂಡ ಇದರಲ್ಲಿ ತೆರಳಬಹುದು. ಅಲ್ಲದೆ ಮದುವೆಗೂ ಕೂಡ ಈ ಜೆಟ್ ಹಾಗೂ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಲಾಗುತ್ತದೆ.
ಉತ್ಸವಗಳಲ್ಲೂ ಹೆಲಿಕಾಪ್ಟರ್ ಬಾಡಿಗೆ ಸಿಗುತ್ತದೆ…
ಜಾತ್ರೆ, ಹಬ್ಬಗಳಿಗೂ ಹೆಲಿಕಾಪ್ಟರ್ ಬಾಡಿಗೆ ಪಡೆಯಬಹುದು. ದಸರಾ, ಹಾಸನಾಂಭ, ಹಂಪಿ ಉತ್ಸವದಲ್ಲೂ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಬಿಡಲಾಗುತ್ತದೆ. ಅಲ್ಲಿ ಹೆಲಿಕಾಪ್ಟರ್‌ನಲ್ಲಿ ಹಾರಲು ಬಯಸುವವರು ಇಂತಿಷ್ಟು ಹಣ ನೀಡಿ ಹಾರಾಡಬಹುದು. 1 ಗಂಟೆಗೆ ಜಿಎಸ್‌ಟಿ ಸೇರಿ ಒಂದುವರೆ ಲಕ್ಷ ನೀಡಬೇಕಾಗುತ್ತದೆ. ಹತ್ತು ನಿಮಿಷ ಕುಳಿತುಕೊಳ್ಳುವವರು ಸರಿಸುಮಾರು 4-5 ಸಾವಿರ ನೀಡಬೇಕಾಗುತ್ತದೆ.
ಹೆಲಿಕಾಪ್ಟರ್ ಯಾವುದಕ್ಕೆಲ್ಲ ಬಳಸಲಾಗುತ್ತದೆ?
ಹೆಲಿಕಾಪ್ಟರ್‌ನಲ್ಲಿ ಸರ್ವೇ ವರ್ಕ್ ಮಾಡಲಾಗುತ್ತದೆ, ಅಲ್ಲದೆ ಮೂವಿ ಶೂಟಿಂಗ್ ಕೂಡ ಮಾಡಲಾಗುತ್ತದೆ. ಆಕಾಶದಲ್ಲಿ ಮದುವೆ ಆಗಲು ಬಯಸುವವರಿಗೂ ಅವಕಾಶ ಇದೆ. ಹೀಗೆ ಹೆಲಿಕಾಪ್ಟರ್ ಹಾಗೂ ಪ್ರೈವೇಟ್ ಜೆಟ್‌ಗಳನ್ನು ನೀವು ಬಸ್, ಕ್ಯಾಬ್ ಹಾಗೂ ರೈಲಿನಂತೆ ಬುಕ್ ಮಾಡಿಕೊಳ್ಳಬಹುದು. ಆಕಾಶದಲ್ಲಿ ಹಾರಾಡುವ ಕನಸನ್ನು ನನಸಾಗಿಸಿಕೊಳ್ಳಬಹುದು.