ಪುತ್ತೂರು: ಕೇರಳದ ಕಿನ್ನಿಂಗಾರಿನಲ್ಲಿ ಸಲೂನ್ ಹೊಂದಿದ್ದ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬಡಗನ್ನೂರು ಗ್ರಾಮದ ತಲೆಂಜಿ ಎಂಬಲ್ಲಿರುವ ಸಾಮಾಜಿಕ ಗೇರು ನಡುತೋಪು ಗುಡ್ಡದಲ್ಲಿ ಶನಿವಾರ ನಡೆದಿದೆ.

ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೋಗೀಶ್ ಬಂಡಾರಿ (42) ಆತ್ಮಹತ್ಯೆ ಮಾಡಿಕೊಂಡವರು.

ತಲೆಂಜಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ಶನಿವಾರ ಬೆಳಿಗ್ಗೆ ಕೊಲದಲ್ಲಿರುವ ಹಾಲಿನ ಸೊಸೈಟಿಗೆ ಹಾಲು ಕೊಂಡೊಯ್ಯುವ ವೇಳೆ ತಲೆಂಜಿಯ ಗೇರು ನಡುತೋಪು ಭಾಗದಿಂದ ಮೊಬೈಲ್ ರಿಂಗಣಿಸುತ್ತಿದ್ದ ಶಬ್ದ ಕೇಳಿ ಬಂದಿತ್ತು. ಇದನ್ನು ಪರಿಶೀಲಿಸಿದ ಅವರು ಸ್ಥಳಕ್ಕೆ ತೆರಳಿದಾಗ ವ್ಯಕ್ತಿಯೊಬ್ಬರು ಮರವೊಂದಕ್ಕೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

ಕಾಸರಗೋಡು ಜಿಲ್ಲೆಯ ಕಿನ್ನಿಂಗಾರಿನಲ್ಲಿ ಸಲೂನ್ ಅಂಗಡಿ ಹೊಂದಿದ್ದ ಯೋಗೀಶ್ ಬಂಡಾರಿ ಅವರು ಅಲ್ಲೇ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸ್ತವ್ಯ ಹೊಂದಿದ್ದರು. ಶುಕ್ರವಾರ ಸಂಜೆ ಪಾಪೆಮಜಲಿನಲ್ಲಿರುವ ಮನೆಗೆ ಬಂದಿದ್ದ ಅವರು ಕಿನ್ನಿಂಗಾರಿಗೆ ಹೋಗುವುದಾಗಿ ರಾತ್ರಿ ವೇಳೆ ಮನೆಯಲ್ಲಿ ತಿಳಿಸಿ ಬಂದಿದ್ದರು. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!