
ಮಂಗಳೂರು :-ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಅಡ್ಯಾರ್ – ಕಣ್ಣೂರು ನಿವಾಸಿ ಅಡ್ಯಾರ್ – ಕಣ್ಣೂರು ಕೇಂದ್ರ ಜುಮಾ ಮಸೀದಿಯ ಜಮಾಅತ್ ನ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ ಹಾಗೂ ಮಂಗಳೂರು ನಸೀಮಾ ಬೀಡಿ ಮಾಲಕರಾದ ಅಬ್ದುಲ್ ರಹಿಮಾನ್ ಹಾಜಿಯವರು ನ. 24 ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಮಕ್ಕಳಾದ ಹಬೀಬ್, ಇಮ್ತಿಯಾಝ್,ಸಿರಾಜ್,ಇಮ್ರಾನ್, ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ನಂಡೆ ಪೆಂಙಳ್, ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆಗೈಯ್ಯುತ್ತಿರುವ ರಿಯಾಝ್ ಕಣ್ಣೂರು ರವರನ್ನು ಅಗಲಿದ್ದಾರೆ.






