ಕ ಲಮಸೆರಿ: ಕೊಲೆ ಮಾಡಲೇಬೇಕು, ಮೊದಲ ಪ್ರಯತ್ನದಲ್ಲೇ ಆಕೆಯನ್ನು ಹತ್ಯೆಗೈಯಬೇಕು ಎಂದು ದೊಡ್ಡ ಸಂಚು ಹೂಡಿದ್ದ ದುಷ್ಕರ್ಮಿಗಳು, ಕೇವಲ ಕೊಲೆ ಮಾಡಿ ಪರಾರಿಯಾದರೆ ಸಾಲದು, ಹತ್ಯೆಗೈದ್ದಿದ್ದು ನಾವೇ ಎಂಬುದಕ್ಕೆ ಯಾವುದೇ ಸುಳಿವು ಪೊಲೀಸರಿಗೆ ಸಿಗಬಾರದು ಎಂದು ಕೊಲೆ ಮಾಡುವ ಎರಡು ವಾರಗಳ ಹಿಂದೆಯೇ ಟ್ರಯಲ್ ನಡೆಸಿರುವ ಭಯಾನಕ ಘಟನೆ ಕೇರಳದ ಕಲಮಸೆರಿಯಲ್ಲಿ ವರದಿಯಾಗಿದೆ.
ಮಾಸ್ಟರ್ ಪ್ಲ್ಯಾನ್ರಕ್ತದ ಕಲೆ ಬೀಳಬಹುದುಡ್ರೆಸ್ ರಿಹರ್ಸಲ್
ಮಾಸ್ಟರ್ ಪ್ಲ್ಯಾನ್
ಜೇಸಿ ಎಂಬ ಮಹಿಳೆಯ ಹತ್ಯೆಗೆ ಆರೋಪಿಗಳಾದ ಗಿರೀಶ್ ಬಾಬು ಮತ್ತು ಖದೀಜಾ ದೊಡ್ಡ ಸಂಚನ್ನೇ ರೂಪಿಸಿದ್ದರು. ಹತ್ಯೆಗೆ ಎರಡು ತಿಂಗಳ ಮೊದಲೇ ಇಬ್ಬರೂ ಒಟ್ಟಿಗೆ ಕುಳಿತು, ಹೇಗೆ ಸಾಯಿಸಬೇಕು, ಯಾವ ರೀತಿ ನಾವು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಬೇಕು. ಕೊಲೆ ನಡೆದ ಸ್ಥಳದಲ್ಲಿ ಯಾವುದೇ ಸುಳಿವು ಖಾಕಿ ಪಡೆಗೆ ಸಿಗದಂತೆ ಹೇಗೆ ಎಚ್ಚರವಹಿಸಬೇಕು ಎಂದೆಲ್ಲಾ ಭಾರೀ ತಲೆಕೆಡಿಸಿಕೊಂಡು, ಮಹಿಳೆಯನ್ನು ಹತ್ಯೆಗೈಯಲು ತಾವಿಬ್ಬರೇ ಟ್ರಯಲ್ ಮಾಡಿ ನೋಡಿದ್ದಾರೆ. ಆದರೆ, ಆರೋಪಿಗಳ ಮಾಸ್ಟರ್ ಪ್ಲ್ಯಾನ್ ಅನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮಹಿಳೆಯ ಬರ್ಬರ ಕೊಲೆಗೆ ಕಾರಣರಾದ ಇಬ್ಬರನ್ನು ಕಂಬಿ ಹಿಂದೆ ಕೂರಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ.
ರಕ್ತದ ಕಲೆ ಬೀಳಬಹುದು
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತಮ್ಮ ತನಿಖೆಯಲ್ಲಿ ಬಹಿರಂಗಪಡಿಸಿದ ಮಾಹಿತಿ ಪ್ರಕಾರ, ಗಿರೀಶ್ ಬಾಬು ಜೇಸಿಯನ್ನು ಮೊದಲು ವಿವಸ್ತ್ರಗೊಳಿಸಿ ನಂತರ ಆಕೆಯನ್ನು ಬೆತ್ತಲೆಯಾಗಿಯೇ ಕೊಲೆ ಮಾಡಿರುವುದು ಪತ್ತೆಯಾಗಿದೆ. ಮನೆಯಲ್ಲಿ ಎಲ್ಲಿಯೂ ಬೆರಳಚ್ಚು ಬೀಳದಂತೆ ಮುಂಜಾಗ್ರತೆ ವಹಿಸಿದ್ದ ಗಿರೀಶ್, ಹೂಡಿದ್ದ ಸಂಚಿನ ಪ್ರಕಾರವೇ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ರಕ್ತ ಚಿಮ್ಮುವಂತೆ ಕೊಲೆ ಮಾಡಬಾರದು, ಮಾಡಿದರೆ ಮೈಮೇಲೆ ರಕ್ತದ ಕಲೆ ಬೀಳಬಹುದು ಎಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಉಸಿರುಗಟ್ಟಿಸಿರುವುದಾಗಿ ವರದಿಯಾಗಿದೆ. ಮೂಲಗಳ ಪ್ರಕಾರ, ಮಹಿಳೆಯನ್ನು ಕೊಲೆ ಮಾಡಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಡ್ರೆಸ್ ರಿಹರ್ಸಲ್
ಎರಡು ಬಾರಿ ಮೃತ ಮಹಿಳೆಯ ಫ್ಲ್ಯಾಟ್ನಲ್ಲಿ ಬೇರೆ ಯಾರೂ ಇರಬಾರದು ಮತ್ತು ಜೇಸಿ ಅಪಾರ್ಟ್ಮೆಂಟ್ ಇರುವ ಕೂನಂತೈ ಪ್ರದೇಶದಲ್ಲಿ ಯಾವ ಸಮಯದಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ ಎಂಬುದನ್ನು ನಿಖರವಾಗಿ ತಿಳಿದ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಡ್ರೆಸ್ ರಿಹರ್ಸಲ್ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಅಥವಾ ಸುತ್ತಮುತ್ತ ಯಾವುದೇ ಕ್ಯಾಮರಾಗಳಿಲ್ಲ ಎಂಬುದನ್ನು ದೃಢಪಡಿಸಿಕೊಂಡ ಗಿರೀಶ್, ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಕಡಿಮೆ ಜನಸಂದಣಿ ಇರುವುದನ್ನು ತಿಳಿದುಕೊಂಡಿದ್ದಾನೆ. ಕೊಲೆಗೈಯುವ ದಿನವು ಮಾಡಿಕೊಂಡಿದ್ದ ಟ್ರಯಲ್ನಂತೆಯೇ ಎಂಟ್ರಿಕೊಟ್ಟು, ತಮ್ಮ ಕೆಲಸ ಮುಗಿಸಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದಾರೆ