ಬೆಂಗಳೂರು : (ನ.29): ಈಗಾಗಲೇ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಅಸ್ಸಾಂ ಯುವತಿ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಸ್ಸಾಂ ಯುವತಿಯನ್ನು ಲವ್ ಮಾಡೋದಾಗಿ ರೂಮಿಗೆ ಕರೆಸಿಕೊಂಡು ಸಮ್ಮತಿ ಸೆಕ್ಸ್ ಮೂಲಕ ಕಾಮತೃಷೆ ತೀರಿಸಿಕೊಂಡ ಕೇರಳದ ಯುವಕ ನಂತರ ಆಕೆಯನ್ನು ಕೊಲೆ ಮಾಡಿ ಪರಾರಿ ಆಗಿದ್ದು, ಇದೀಗ ಪೊಲೀಸರ ಕೈಗೆ ಹೊರ ರಾಜ್ಯದಲ್ಲಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಇಂದಿರಾನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಕಳೆದ ಮಂಗಳವಾರ ಅಸ್ಸಾಂ ಮೂಲದ ಯುವತಿಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಯುವತಿ ಯಾರೆಂದು ಪತ್ತೆ ಮಾಡಿದಾಗ ಆಕೆ ಅಸ್ಸಾಂ ಮೂಲದ ಯುವತಿ ಮಾಯಾ ಗೊಗೋಯ್ ಎಂಬುದು ಗೊತ್ತಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಯುವತಿ, ಇಲ್ಲಿ ಕೆಲಸ ಮಾಡುತ್ತಾ ಕೇರಳದ ಯುವಕ ಆರವ್‌ ಹನೋಯ್‌ನನ್ನು ಪ್ರೀತಿ ಮಾಡಿದ್ದಾಳೆ. ಇಬ್ಬರೂ ಕೆಲ ದಿನಗಳ ಕಾಲ ತಮ್ಮ ತಮ್ಮ ಊರಿಗೆ ಹೋಗಿದ್ದರು.

ಊರಿನಿಂದ ಇಬ್ಬರೂ ವಾಪಸ್ ಬೆಂಗಳೂರಿಗೆ ಬಂದ ನಂತರ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ರೂಮು ಮಾಡಿದ್ದಾರೆ. ಅಲ್ಲಿ ಮೂರು ದಿನ ವಾಸ್ತವ್ಯ ಹೂಡಿದ್ದ ಇಬ್ಬರೂ ಸಮ್ಮತಿ ಸೆಕ್ಸ್ ಮಾಡಿದ್ದಾರೆ. ಇದಾದ ನಂತರ ಇಬ್ಬರ ನಡುವೆ ಅದ್ಯಾವ ಕಾರಣಕ್ಕೆ ಜಗಳ ಬಂದಿದೆಯೋ ಗೊತ್ತಿಲ್ಲ, ಯುವತಿಯ ಕುತ್ತಿಗೆಗೆ ಹಗ್ಗ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ, ಮೃತದೇಹದೊಂದಿಗೆ ಒಂದು ದಿನ ಕಳೆದಿದ್ದಾನೆ.

 

ನಂತರ, ಮೃತದೇಹದೊಂದಿಗೆ ಒಂದು ದಿನ ಕಳೆದಿದ್ದಾನೆ. ಈ ನಡುವೆ ಆಕೆಯ ದೇಹಕ್ಕೆ ಎಲ್ಲೆಂದರದಲ್ಲಿ ಚಾಕು ಚುಚ್ಚಿದ್ದಾನೆ. ನಂತರ, ಮೂರನೇ ದಿನ ಅಂದರೆ ಮಂಗಳವಾರ ಹೋಟೆಲ್ ಕೋಣೆ ಬಿಟ್ಟು ಅಲ್ಲಿಂದ ಪರಾರಿ ಆಗಿದ್ದಾನೆ.

ಇನ್ನು ರೂಮಿನ ಮಾಲೀಕರು ಯುವಕ ಒಬ್ಬನೇ ಓಡಾಡುವುದನ್ನು ನೋಡಿ ಅನುಮಾನಗೊಂಡು ಕೋಣೆಗೆ ಹೋಗಿ ನೋಡಿದಾಗ ಕೊಲೆಯಾದ ದೃಶ್ಯ ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು. ಇದೀಗ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಲಭ್ಯವಾಗಿದ್ದು, ಇದರಲ್ಲಿ ಯುವತಿ ಕೊಲೆಗೂ ಮುನ್ನ ಸಮ್ಮತಿ ಸೆಕ್ಸ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಯುವತಿ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಕೊಲೆ ಆರೋಪಿ ಹೊರ ರಾಜ್ಯದಲ್ಲಿ ಅರೆಸ್ಟ್: ಅಸ್ಸಾಂ ಯುವತಿಯನ್ನು ಪ್ರೀತಿಸುವುದಾಗಿ ರೂಮಿಗೆ ಕರೆದು ಸೆಕ್ಸ್ ಮಾಡಿ ಕೊಲೆಗೈದು ಪರಾರಿ ಆಗಿದ್ದ ಆರವ್ ಹನೋಯ್ ಪೊಲೀಸರಿಂದ ತಲೆ ಮರೆಸಿಕೊಂಡು ಹೊರ ರಾಜ್ಯಕ್ಕೆ ಓಡಿ ಹೋಗಿದ್ದನು. ಇಂದಿರಾನಗರ ಠಾಣೆಯ ಪೊಲೀಸರು ಆರೋಪಿ ಬಂಧನಕ್ಕೆ ಎರಡು ವಿಶೇಷ ತಂಡಗಳಾಗಿ ಹೊರ ರಾಜ್ಯಗಳಿಗೆ ತೆರಳಿದ್ದರು. ಇಂದು ಶುಕ್ರವಾರ ಮಧ್ಯಾಹ್ನದ ವೇಳೆಗೆ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಇಂದಿರಾನಗರ ಠಾಣೆಗೆ ಕರೆದು ತರಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!