
ಉಡುಪಿ, ನ.29: ಪತಿ- ಪತ್ನಿ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿದ ದುರಂತ ಘಟನೆ ಉದ್ಯಾವರದಲ್ಲಿ ನಡೆದಿದೆ.
ಉದ್ಯಾವರ ಗ್ರಾಪಂ ಸದಸ್ಯ ಲಾರೆನ್ಸ್ ಡೇಸಾ (60) ಮತ್ತು ಅವರ ಪತ್ನಿ ಸರಕಾರಿ ಶಾಲಾ ಶಿಕ್ಷಕಿ ಜೂಲಿಯಾನ ಡೇಸಾ (57) ಮೃತಪಟ್ಟವರು. ಜೂಲಿಯಾನ ಅವರು ನ.28ರ ಗುರುವಾರ ಬೆಳಗ್ಗೆ ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದರು. ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಇರಿಸಲಾಗಿತ್ತು. ಆನಂತರ, ಲಾರೆನ್ಸ್ ಡೇಸಾ ಅವರೂ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂಲಿಯಾನ ಗುರುವಾರ ಸಂಜೆ ಮೃತಪಟ್ಟರೆ, ಲಾರೆನ್ಸ್ ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಆಮೂಲಕ ಪತಿ- ಪತ್ನಿ ಇಬ್ಬರೂ ನ.28 ಮತ್ತು 29ರಂದು ಕೆಲವೇ ಗಂಟೆಗಳ ಅಂತರದಲ್ಲಿ ಸಾವು ಕಂಡಿದ್ದಾರೆ.ತಾಯಿ ಅನಾರೋಗ್ಯಕ್ಕೀಡಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ದಂಪತಿ ಮಗ ಮತ್ತು ಪುತ್ರಿಯನ್ನು ಅಗಲಿದ್ದಾರೆ.






