
ಕಡಬ: ಕಡಬ ತಾಲೂಕು ಚಾರ್ವಾಕ ಮಂಟಮೆ ನಿವಾಸಿ ಬಿಜೆಪಿಯ ಸಕ್ರೀಯ ಕಾರ್ಯಕರ್ತ, ಕೃಷಿಕ ಬಾಬು ಶೆಟ್ಟಿ ಮಂಟಮೆ (70) ಅಲ್ಪಕಾಲದ ಅಸೌಖ್ಯದಿಂದ ನ. 27 ರ ಬುಧವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಪ್ರಗತಿಪರ ಕೃಷಿಕರಾಗಿದ್ದ ಶ್ರೀಯುತರು ಅತ್ಯುತ್ತಮ ತರಕಾರಿ ಬೆಳೆಗಾರರಾಗಿದ್ದರು.
ಪತ್ನಿ ಸುನಂದಾ, ಪುತ್ರರಾದ ರಜನೀಕಾಂತ್. ವಿಜಯವಾಣಿ ಜಾಹೀರಾತು ವಿಭಾಗದ ಲತೇಶ್ ಶೆಟ್ಟಿ ಚಾರ್ವಾಕ, ಉಪ್ಪಿನಂಗಡಿ ಮೆಸ್ಕಾಂ ಪವರ್ ಮ್ಯಾನ್ ವಿತೇಶ್ ಶೆಟ್ಟಿ. ಪುತ್ರಿ ಸ್ಮಿತಾ ಸೇರಿ ಮೂವರು ಪುತ್ರರು. ಓರ್ವ ಪುತ್ರಿಯನ್ನು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.






