ಅಪ್ರಾಪ್ತೆಯನ್ನು ಪ್ರೀತಿಸಿದ್ದ (Love)ಯುವಕನ ಜೀವನ ದುರಂತ ಅಂತ್ಯ ಕಂಡಿದೆ. ಅಪ್ರಾಪ್ತೆಯನ್ನು ಪ್ರತೀತಿಸುತ್ತಿದ್ದ ಯುವಕ ಜಿಲೆಟಿನ್ (Gelatin) ಸ್ಫೋಟಿಸಿಕೊಂಡು ಸಾವನ್ನಪ್ಪಿದ ಭೀಕರ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ (Nagamangala) ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ.
ನಾಗಮಂಗಲದ ಬಸವೇಶ್ವರ ನಗರದ ರಾಮಚಂದ್ರ ಎಂಬ ಯುವಕ ಕಾಳೇನಹಳ್ಳಿಯ ಅಪ್ರಾಪ್ತೆಯನ್ನು ಪ್ರೀತಿ ಮಾಡುತ್ತಿದ್ದ. ಈ ಯುವಕ ಮತ್ತು ಅಪ್ರಾಪ್ತೆ ಕಳೆದ ವರ್ಷ ಮನೆ ತೊರೆದು ಓಡಿ ಹೋಗಿದ್ದರು. ಆಗ ಯುವಕನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಶನಿವಾರ ರಾತ್ರಿ ಯುವತಿ ಮನೆ ಬಳಿ ಹೋಗಿದ್ದ ಯುವಕ. ಬಂಡೆಗಳನ್ನ ಸಿಡಿಸುವ ಜಿಲೆಟಿನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಜಿಲೆಟಿನ್ ಸಿಡಿದ ಪರಿಣಾಮ ಯುವಕನ ದೇಹ ಚಿದ್ರವಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ