ಇಲ್ಲಿನ ಅಲ್ ಬರ್ಶಾದ ಮಾಲ್ ಆಫ್ ಎಮಿರೇಟ್ಸ್ ಸಮೀಪ ರವಿವಾರ ರಾತ್ರಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ವಸತಿ ಕಟ್ಟಡದಲ್ಲಿ ಕಾಣಿಸಿಕೊಂಡ ಅವಘಡದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ದುಬೈ ಸಿವಿಲ್ ಡಿಫೆನ್ಸ್(ನಾಗರಿಕ ರಕ್ಷಣಾಲಯ) ಸೋಮವಾರ ತಿಳಿಸಿದೆ.

https://twitter.com/DailyNewsmart/status/1873476363342196868?ref_src=twsrc%5Etfw%7Ctwcamp%5Etweetembed%7Ctwterm%5E1873476363342196868%7Ctwgr%5Eb455850bdf06c90191a8c7c44679606a48cc196b%7Ctwcon%5Es1_c10&ref_url=https%3A%2F%2Fapi-news.dailyhunt.in%2F

ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ ರೂಮ್’ಗೆ ನಿನ್ನೆ ರಾತ್ರಿ 10.30ರ ಸಮಯಕ್ಕೆ ಬೆಂಕಿ ಬಿದ್ದ ಬಗ್ಗೆ ಕರೆ ಬಂದಿದೆ. ಈ ವೇಳೆ ತಕ್ಷಣ ಸ್ಪಂದಿಸಲಾಗಿದ್ದು, ಅಲ್ ಬರ್ಶಾ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

8 ಮಹಡಿಯ ಈ ಕಟ್ಟಡದ ಮುಂಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇದು ಎಲ್ಲ ಕಡೆ ಹರಡಿದೆ. ಈ ವೇಳೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಲ್ ಬರ್ಶಾ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು, ಕಮಾಂಡರ್’ಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Leave a Reply

Your email address will not be published. Required fields are marked *

Join WhatsApp Group
error: Content is protected !!