ನಗರದಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ (Honey Trap Case) ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಉದ್ಯಮಿಗಳು (Business Man) ರಾಜಕಾರಣಿಗಳು (Politicians) ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪೊಲೀಸ್ ಕಾನ್ಸಟೇಬಲ್ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಖೆಡವಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಪಲೀಸನ ಪತ್ನಿಂದ 8 ಲಕ್ಷ ಹಣ ವಸೂಲು
ಹೌದು, ಕಲಬುರಗಿಯ ಸೆನ್ ಪೊಲೀಸ್ ಠಾಣೆಯ ಕಾನ್ಸಟೇಬಲ್‌ನನ್ನು ಪೂಜಾ ಡೊಂಗರಗಾಂವ್ ಎಂಬ ಮಹಿಳೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಾಳೆ. ಆ ಬಳಿಕ ಕಾನ್ಸಟೇಬಲ್ ಪತ್ನಿಯಿಂದ ಎಂಟು ಲಕ್ಷ ಹಣ ವಸೂಲಿ ಮಾಡಿದ್ದಾಳಂತೆ!
ಪೂಜಾ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸನ ಪತ್ನಿ
ಆರೋಪಿ ಪೂಜಾ ಡೊಂಗರಗಾಂವ್ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿಂದೆ ಕಲಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಈ ಪೂಜಾ ಭಾಗಿಯಾಗಿದ್ದಳು. ಪೂಜಾ ಮತ್ತು ಅಮರ್ ಸಿಂಗ್ ಎಂಬುವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 8 ಲಕ್ಷ ಹಣ ವಸೂಲಿ ಮಾಡಿದ್ದಳು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.














