
ತ ಮಿಳುನಾಡು: ಇಲ್ಲಿನ ತಂಜಾವೂರಿನಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಬರುತ್ತಿದ್ದ ಎರಡು ಬಸ್‌ಗಳ ನಡುವೆ ಸಿಲುಕಿ ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಭಯಾನಕ ದೃಶ್ಯ ವೈರಲ್ ಆಗಿದ್ದು, ಈ ವ್ಯಕ್ತಿ ಪವಾಡ ಸದೃಶವಾಗಿ ಪಾರಾಗಿರುವ ರೀತಿ ಬೆಚ್ಚಿ ಬೀಳಿಸುವಂತಿದೆ.
ಜನವರಿ 3 ರಂದು ಥಮರನ್‌ಕೊಟ್ಟೈನಿಂದ ಪಟ್ಟುಕೊಟ್ಟೈಗೆ ಪ್ರಯಾಣಿಸುತ್ತಿದ್ದ ಭರತ್ ಖಾಸಗಿ ಬಸ್ ಹತ್ತಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಸರ್ಕಾರಿ ಬಸ್ ಖಾಸಗಿ ಬಸ್ ಅನ್ನು ಹಿಂದಿಕ್ಕಲು ವೇಗವಾಗಿ ಬಂದು ಓವರ್ ಟೇಕ್ ಮಾಡಿದೆ.ಈ ವೇಳೆ ವೇಗವಾಗಿ ಬರುತ್ತಿದ್ದ ಎರಡು ವಾಹನಗಳ ನಡುವೆ ಭರತ್ ಸಿಕ್ಕಿಹಾಕಿಕೊಂಡಿದ್ದರು.
ಈ ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಈ ಘಟನೆ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಪಾದಚಾರಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗೃತಿಯಾಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ.






