ಸಾಲ ವಸೂಲಿ ಕಿರುಕುಳ ನೀಡಬಾರದೆಂದು ಸಿಎಂ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದರೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರಿದಿದೆ. ಇದೀಗ ವ್ಯಕ್ತಿಯೊಬ್ಬ ಫೈನಾನ್ಸ್ ಕಿರುಕುಳದಿಂದ ಪಾರಾಗಲು ಬುರ್ಖಾ ಹಾಕಿಕೊಂಡು ಏಟು ತಿಂದಿದ್ದಾನೆ.
ವ್ಯಕ್ತಿಯನ್ನು ಹುಸೇನಸಾಬ್ ಮನಿನಾಗರ ಎಂದು ಗುರುತಿಸಲಾಗಿದೆ. ಈ ಘಟನೆ ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ 47ರಲ್ಲಿ ನಡೆದಿದೆ.
ಹುಸೇನಸಾಬ್ ಇಸ್ಪೀಟ್ ಆಡುವುದಕ್ಕೆ ಕೈ ಸಾಲ ಮಾಡಿಕೊಂಡಿದ್ದು, ತನ್ನ ಗುರುತು ಯಾರಿಗೂ ಸಿಗಬಾರದೆಂದು ಬುರ್ಖಾ ಧರಿಸಿ ತಿರುಗಾಡುತ್ತಿದ್ದನು. ಸಾಲ ವಸೂಲಿಗೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಹುಸೇನಸಾಬ್ ಮನಿನಾಗರ ಪತ್ನಿಯ ಬುರ್ಖಾ ಧರಿಸುತ್ತಿದ್ದನು. ಆದರೆ ಆತನ ಚಲನವಲನ ಬಗ್ಗೆ ಸಂಶಯ ಬಂದು ಚೆಕ್ ಮಾಡಿದಾಗ ಬಣ್ಣ ಬಯಲಾಗಿದೆ.
ಅವರು ಸಾಲ ವಸೂಲಿಗೆ ಬಂದವರಿಗೆ ಚಾಕು ತೋರಿಸಿದ್ದರು ಎಂಬ ಆರೋಪ ಕೂಡ ಹುಸೇನಸಾಬ್ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆ ಹುಸೇನಾಬ್ಗೆ ಥಳಿಸಲಾಗಿದೆ. ಈ ಅಸಂಬಂಧ ನವನಗರ ಠಾಣೆಯಲ್ಲಿ ದೂರು ನೀಡಲಾಗಿದೆ.