ಭೂತ, ಪ್ರೇತ, ಆತ್ಮಗಳ ಕಥೆಯನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ…ಆದರೆ ರಿಯಲ್ ಲೈಫ್ ನಲ್ಲಿ ಇವೆಲ್ಲಾ ಉಂಟು ಎಂದರೆ ನೀವು ನಂಬುತ್ತೀರಾ..? ನಂಬಲು ಅಸಾಧ್ಯವೆನಿಸಿದರೂ ಇದು ಸತ್ಯವಂತೆ.! ದಕ್ಷಿಣ ಕನ್ನಡದಲ್ಲಿ ಕುಟುಂಬವೊಂದಕ್ಕೆ ಕಳೆದ 3 ತಿಂಗಳಿನಿಂದ ಪ್ರೇತ-ಭಾದೆ ಕಾಡುತ್ತಿದೆ.

ಮೊಬೈಲ್ ನಲ್ಲಿ ವಿಚಿತ್ರ ಮುಖದ ಫೋಟೋ ಕೂಡ ಸೆರೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉಮೇಶ್ ಶೆಟ್ಟಿ ಎಂಬುವವರ ಕುಟುಂಬಕ್ಕೆ ವಿಚಿತ್ರ ಅನುಭವಗಳಾಗುತ್ತಿದೆ.

ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಪಾತ್ರಗಳ ಏಕಾಏಕಿ ಬೀಳುತ್ತದೆಯಂತೆ. ಅಲ್ಲದೇ ಬಟ್ಟೆಗೆ ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತದೆಯಂತೆ.ಅಲ್ಲದೇ ಮಲಗಿದ್ದಾಗ ಯಾರೋ ಕುತ್ತಿಗೆ ಹಿಡಿದಂತೆ ಆಗುತ್ತದೆ.ಅಲ್ಲದೇ ಮನೆಯಲ್ಲಿ ಯಾರೋ ಅತ್ತಿಂದಿತ್ತ ಓಡಾಡುತ್ತಿರುವಂತೆ ಭಾಸವಾಗುತ್ತದೆಯಂತೆ. ಮನೆಯಲ್ಲಿ ಭೂತ ಪ್ರೇತಗಳು ನಮ್ಮನ್ನು ಕಾಡುತ್ತಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಉಮೇಶ್ ಶೆಟ್ಟಿ ಅವರ ಪುತ್ರಿ ಮೊಬೈಲ್ ನಲ್ಲಿ ವಿಚಿತ್ರ ಫೋಟೋ ಸೆರೆ ಹಿಡಿದಿದ್ದಾರೆ. ಘಟನೆ ಬಗ್ಗೆ ಗ್ರಾಮದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!