
ಬಿ ಹಾರದ ಬೆಗುಸರಾಯಿಯಲ್ಲಿ ಇಬ್ಬರು ಯುವಕರು ಬುರ್ಖಾ ಧರಿಸಿ ಸರಸ್ವತಿ ಪೂಜೆಯಲ್ಲಿ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ ವಿಡಿಯೋ ವೈರಲ್ ಆದ ನಂತರ ಅವರನ್ನು ಬಂಧಿಸಲಾಗಿದೆ. ಸ್ಥಳೀಯರು ದೂರು ನೀಡಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ
ವರದಿಗಳ ಪ್ರಕಾರ, ಇಬ್ಬರು ಹಿಂದೂ ಯುವಕರು ಬೆಗುಸರಾಯಿಯ ಸ್ಥಳೀಯ ಪ್ರದೇಶದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡಿದ್ದರು.
ಇದು ಕೆಲವರಿಗೆ ಆಕ್ಷೇಪಣೀಯವಾಗಿ ಕಂಡುಬಂದಿದ್ದು, ದೂರುಗಳ ನಂತರ, ಅಧಿಕಾರಿಗಳು ಮಧ್ಯ ಪ್ರವೇಶಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡರು
