ಪುತ್ತೂರು; ದಕ ಜಿಲ್ಲೆಯಲ್ಲಿ ಕೆಲಸ ಮಾಡುವುದು ಉತ್ತಮವಾದ ಅನುಭವ. ತನ್ನ ಮೊದಲ ಅವಕಾಶವನ್ನು ಪುತ್ತೂರು ಉಪವಿಭಾಗದಲ್ಲಿ ಪಡೆದುಕೊಂಡ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ತನ್ನ ವೃತ್ತಿಗೆ ನ್ಯಾಯ ಸಲ್ಲಿಸಿದ್ದಾರೆ. ಜುಬಿನ್ ಮೊಹಾಪಾತ್ರ ಅವರು ಬಡಜನರ ಮೇಲೆ ಹಾಗೂ ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿ. ಸುಬ್ರಹ್ಮಣ್ಯ ದೇವಳದ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡುವ ಮೂಲಕ ಭಕ್ತಾಧಿಗಳ ಶ್ಲಾಘನೆಗೂ ಪಾತ್ರವಾಗಿದ್ದಾರೆ. ಪುತ್ತೂರು ಕೆಲಸ ಮಾಡಲು ಅತ್ಯುತ್ತಮವಾದ ಸ್ಥಳ ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅಭಿಪ್ರಾಯಪಟ್ಟರು.
ರಾಯಚೂರು ಮಹಾನಗರ ಪಾಲಿಕೆಯ ಕಮಿಷನರ್ ಆಗಿ ವರ್ಗಾವಣೆಗೊಂಡ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರಿಗೆ ಇಲಾಖೆಗಳ ವತಿಯಿಂದ ಶುಕ್ರವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದಾ ನೆನಪಿರುತ್ತದೆ ಪುತ್ತೂರು
ಪುತ್ತೂರು ನನ್ನ ಮೊದಲ ಕೆಲಸದ ಸ್ಥಳ. ಇಲ್ಲಿನ ನೆನಪು ಸದಾ ಕಾಲ ನೆನಪಿರುತ್ತದೆ. ಇಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ತುಂಬಾ ಜನರಿಗೆ ಅನುಕೂಲ ಮಾಡಲು ಅವಕಾಶ ಇಲಾಖೆ ಇದಾಗಿದೆ. ಸಾಧ್ಯವಾದಷ್ಟು ಇಲ್ಲಿ ಕಾರ್ಯಗತ ಮಾಡಲು ಪ್ರಯತ್ನಿಸಿದ್ದೇನೆ. ಇಲ್ಲಿಯದ್ದು ಅತ್ಯುತ್ತಮ ಅನುಭವ ಎಂದರು.
ಪತ್ರಕರ್ತರಿಗೆ ಶ್ಲಾಘನೆ
ಪುತ್ತೂರಿನಲ್ಲಿನ ಅಧಿಕಾರಿ ವರ್ಗದ ಬೆಂಬಲ ನನಗೆ ಸಿಕ್ಕಿತು. ಕೆಲವೊಮ್ಮೆ ನಿಗಧಿತ ಸಮಯಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿಸುತ್ತಿದ್ದೆ. ಇದರಿಂದ ಅದಿಕಾರಿಗಳಿಗೆ ಸಿಬಂದಿಗಳಿಗೆ ಬೇಸರವಾಗಿರಬಹುದು. ಆದರೆ ಅದರ ಪರಿಣಾಮ ತುಂಬಾ ಜನರಿಗೆ ಸಹಾಯವಾಗಿದೆ. ಪುತ್ತೂರಿನ ಪತ್ರಕರ್ತರು ತುಂಬಾ ಸಹಕಾರ ನೀಡಿದ್ದಾರೆ. ಸಾಮಾಜಿಕ ವಿಚಾರಗಳ ಕುರಿತು ತುಂಬಾ ಚರ್ಚೆ ಮಾಡುತ್ತಿದ್ದರು. ನನ್ನ ಕೆಲಸದ ಮೇಲೂ ಈ ಚರ್ಚೆಗಳೂ ಪರಿಣಾಮ ಬೀರಿವೆ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ವೇದಿಕೆಯಲ್ಲಿ ಜುಬಿನ್ ಅವರ ಸಹಪಾಠಿ ಕೇರಳದ ಪ್ರೊಬೆಷನರಿ ಐ.ಎ.ಎಸ್. ಅಧಿಕಾರಿ ಸಾಯಿಕೃಷ್ಣ, ಪುತ್ತೂರು ಪ್ರೊಬೆಷನರಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕ್, ಕಡಬ ತಹಶೀಲ್ದಾರ್ ಪ್ರಭಾಕರ ಖುಜೂರೆ, ಸುಳ್ಯ ತಹಶೀಲ್ದಾರ್ ಮಂಜುಳಾ, ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಉಪಸ್ಥಿತರಿದ್ದರು.  ಪುತ್ತೂರು ಕಂದಾಯ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ್, ಚಂದ್ರ ನಾಯ್ಕ್, ನರಿಯಪ್ಪ, ಸುಲೋಚನಾ ಮೊದಲಾದವರು ಅನುಭವ ಹಂಚಿಕೊAಡರು. ಉಪವಿಭಾಗದ ಅಧಿಕಾರಿಗಳು, ಸಿಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಂದಾಯ ನಿರೀಕ್ಷಕ ಗೋಪಾಲ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!