
ಮೆಡ್ಚಲ್ ಜಿಲ್ಲೆಯಲ್ಲಿ 35 ವರ್ಷದ ವಿವಾಹಿತ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು 22 ವರ್ಷದ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸುಕನ್ಯಾ ಎಂದು ಗುರುತಿಸಲಾದ ಮಹಿಳೆ, ಸಾಮಾಜಿಕ ಮಾಧ್ಯಮದ ಮೂಲಕ ಗೋಪಿ ಎಂಬ ಯುವಕನನ್ನು ಪರಿಚಯ ಮಾಡಿಕೊಂಡಿದ್ದರು.
ಆರಂಭದಲ್ಲಿ ಸಾಮಾನ್ಯ ಸ್ನೇಹಿತರಂತಿದ್ದ ಇವರಿಬ್ಬರ ಸಂಬಂಧ ಕ್ರಮೇಣ ಪ್ರೇಮಕ್ಕೆ ತಿರುಗಿದೆ. ದಿನಗಳು ಕಳೆದಂತೆ ಇಬ್ಬರ ನಡುವಿನ ಆಪ್ತತೆ ಹೆಚ್ಚಾಗಿದ್ದು, ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪತ್ನಿ ನಾಪತ್ತೆಯಾದ ನಂತರ ಸುಕನ್ಯಾ ಅವರ ಪತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಕನ್ಯಾ ಗೋಪಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿರುವುದು ಕಂಡುಬಂದಿದೆ.
ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ ಪೊಲೀಸರು ಮೆಡ್ಚಲ್ ಆಕ್ಸಿಜನ್ ಪಾರ್ಕ್ ಬಳಿ ಇಬ್ಬರನ್ನೂ ಪತ್ತೆ ಹಚ್ಚಿದ್ದಾರೆ. ಆದರೆ ಪೊಲೀಸರನ್ನು ಕಂಡ ಸುಕನ್ಯಾ ಮತ್ತು ಗೋಪಿ ತಮ್ಮ ಮೋಟಾರ್ ಸೈಕಲ್ ಅನ್ನು ಅಲ್ಲೇ ಬಿಟ್ಟು ಬಸ್ಸಿನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
