
ಅಮೆರಿಕಾದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸುದೀಕ್ಷಾ ಕೊನಂಕಿ ನಾಪತ್ತೆಯಾಗಿರುವ ವಿದ್ಯಾರ್ಥಿನಿ. ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುದಿಕ್ಷಾ, ಮಾರ್ಚ್ 6ರಿಂದ ನಾಪತ್ತೆಯಾಗಿದ್ದಾಳೆ.
ಅಂದು ಸಂಜೆ ಆಕೆ ತನ್ನ ಸ್ನೇಹಿತರ ಜೊತೆಗೆ ಕಡಲತೀರದ ಡೊಮಿನಿಕನ್ ರಪಬ್ಲಿಕ್ ಗೆ ಆಗಮಿಸಿದ್ದಳು. ಅಂದು ರಾತ್ರಿಯಿಂದ ಆಕೆಯ ಸುಳಿವಿಲ್ಲ. ಸುದೀಕ್ಷಾ ನಾಪತ್ತೆಯಾಗಿ 11 ದಿನಗಳು ಕಳೆದಿಇವೆ. ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿಇದ್ದಾರೆ.
ಆದರೆ ಪೊಲೀಸರ ಪ್ರಕಾರ ಸುದೀಕ್ಷಾ ಮಾರ್ಚ್ 6ರಂದು ಸಂಜೆ ತನ್ನ ಗೆಳೆಯರ ಜೊತೆ ಕ್ಲಬ್ ವೊಂದರಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋ ಲಭ್ಯವಾಗಿದೆ. ಕ್ಲಬ್ ಆವರಣದಲ್ಲಿ ಆಕೆ ಓಡಾಟ ನಡೆಸುತ್ತಿರುವುದೂ ಪತ್ತೆಯಾಗಿದೆ. ಸುದೀಕ್ಷಾ ಜೊತೆ ಹೋಗಿದ್ದ ಆಕೆಯ ನಾಲ್ವರು ಗೆಳೆಯರ ಪೈಕಿ ಜೋಷುವಾ ರೀಬೆ ಎಂಬಾತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಸುದಿಕ್ಷಾ ಸಮುದ್ರದಲ್ಲಿ ಮುಳುಗಿರುವ ಶಂಕೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
