
ದೇಶದಲ್ಲಿ ಇಷ್ಟು ದಿನ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ದೇಹ ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿರುವ ಘಟನೆ ನಡೆದಿತ್ತು. ಆದರೆ ಲಕ್ನೋದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು 15 ತುಂಡು ಮಾಡಿ ಡ್ರಮ್ ವೊಂದಕ್ಕೆ ಹಾಕಿ ಸಿಮೆಂಟ್ ಮಿಕ್ಸ್ ಮಾಡಿರುವ ಘಟನೆ ನಡೆದಿದೆ
ಮೃತ ಪತಿಯನ್ನು ಸೌರಭ್ ಕುಮಾರ್ ಎಂದು ಗುರುತಿಸಲಾಗಿದೆ. ಸೌರಭ್ 2016 ರಲ್ಲಿ ಮುಸ್ಕಾನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ.. ಮೊದಲು ಮರ್ಚೆಂಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೌರಭ್, ಬಳಿಕ ಲಂಡನ್ ಗೆ ತೆರಳಿ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ..
ಆದರೆ ಮುಸ್ಕಾನ್ ಊರಿನಲ್ಲೇ ತನ್ನ ಮಗಳ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಗಂಡ ಲಂಡನ್ ನಲ್ಲಿ ಇದ್ದ ಹಿನ್ನಲೆ ಪತ್ನಿ ಸಾಹಿಲ್ ಶುಕ್ಲಾ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ಆದರೆ ಈ ವಿಚಾರ ತಿಳಿಯದ ಸೌರಭ್, ಪತ್ನಿಯ ಹುಟ್ಟುಹಬ್ಬಕ್ಕಾಗಿ ಲಂಡನ್ ನಿಂದ ಬಂದಿದ್ದ.
ಪತ್ನಿ ಊರಿಗೆ ಬಂದ ಹಿನ್ನಲೆ ಪ್ರಿಯಕರನ ಜೊತೆ ಸೇರಲು ಸಾಧ್ಯವಾಗದ ಹಿನ್ನಲೆ ಪತಿಯನ್ನು ಕೊಲೆ ಮಾಡಲು ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿದ್ದಾಳೆ. ಅದರಂತೆ ಮಾರ್ಚ್ 4 ರಂದು ಮುಸ್ಕಾನ್ ಪತಿ ಮಲಗಿದ್ದಾಗ ಆತನ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದಾಳೆ.
ಜೊತೆಗೆ ಪ್ರಿಯಕರನೊಂದಿಗೆ ಸೇರಿ ಸೌರಭ್ ದೇಹವನ್ನು 15 ತುಂಡು ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬಳಿಕ ಚೀಲವನ್ನು ಡ್ರಮ್ ಗೆ ಹಾಕಿ ಸಿಮೆಂಟ್ ತುಂಬಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಮುಸ್ಕಾನ್ ತನ್ನ ಮಗಳನ್ನು ತವರು ಮನೆಯಲ್ಲಿ ಬಿಟ್ಟು ತನ್ನ ಪ್ರಿಯಕರ ಸಾಹಿಲ್ ಜೊತೆ ಪರಾರಿಯಾಗಿದ್ದಾಳೆ.
ಇತ್ತ ಮಗಳು ತನ್ನ ತಾಯಿಯ ಕೃತ್ಯವನ್ನು ಅಜ್ಜಿಯ ಬಳಿ ತಿಳಿಸಿದ್ದಾಳೆ. ಈ ವೇಳೆ ಮುಸ್ಕಾನ್ ತಾಯಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ದೂರಿನಂತೆ ಪೊಲೀಸರು ಮುಸ್ಕಾನ್ ಹಾಗೂ ಆತನ ಪ್ರಿಯಕರನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಮುಸ್ಕಾನ್ ತನ್ನ ನೆರೆಹೋರೆಯವರ ಬಳಿ ಪತಿಯೊಂದಿಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿರುವುದಾಗಿ ನಂಬಿಸಿದ್ದಾಳೆ, ಅಷ್ಟೇ ಅಲ್ಲದೆ ಸೌರಭ್ ಕುಟುಂಬಕ್ಕೆ ಕರೆ ಮಾಡಿ ಕೂಡ ಹೇಳಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ
ಸದ್ಯ ಆರೋಪಿಗಳನ್ನು ಸೌರಭ್ ದೇಹವನ್ನು ಬಚ್ಚಿಟ್ಟಿರುವ ಜಾಗಕ್ಕೆ ಕರೆದೊಯ್ದಿದ್ದು, ಘಟನೆಯಾಗಿ ತುಂಬಾ ದಿನ ಆದ್ದರಿಂದ ಡ್ರಮ್ ನಲ್ಲಿ ಸಿಮೆಂಟ್ ಗಟ್ಟಿಯಾಗಿದ್ದ ಹಿನ್ನಲೆ ಮೃತದೇಹವನ್ನು ಹೊರಕ್ಕೆ ತೆಗೆಯಲು ಹರಸಾಹಸ ಪಟ್ಟಿದ್ದಾರೆ.
