ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್‌ಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರ ಕೊಲೆಯ ಭೀಕರತೆಯನ್ನು ಬಹಿರಂಗಪಡಿಸಿದೆ.

ಆರೋಪದ ಪ್ರಕಾರ, ಆತನ ಪತ್ನಿ ಮುಸ್ಕಾನ್ ರಾಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಈ ಕೃತ್ಯವನ್ನು ಎಸಗಿದ್ದಾರೆ.

ದೇಹವನ್ನು ತುಂಡರಿಸಿ ಡ್ರಮ್‌ನಲ್ಲಿ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ, ಸೌರಭ್ ಅವರ ತಲೆಯನ್ನು ಬೇರ್ಪಡಿಸಲಾಗಿತ್ತು, ಎರಡೂ ಕೈಗಳನ್ನು ಮಣಿಕಟ್ಟಿನಿಂದ ಕತ್ತರಿಸಿ, ಕಾಲುಗಳನ್ನು ಹಿಂದಕ್ಕೆ ಬಗ್ಗಿಸಲಾಗಿತ್ತು. ಆಘಾತ ಮತ್ತು ಅತಿಯಾದ ರಕ್ತಸ್ರಾವವೇ ಮರಣಕ್ಕೆ ಕಾರಣ ಎಂದು ದೃಢೀಕರಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹೃದಯಕ್ಕೆ ಮೂರು ಬಾರಿ ತೀವ್ರವಾಗಿ ಚಾಕು ಇರಿದಿರುವುದು ಗೊತ್ತಾಗಿದೆ.

ಮಾರ್ಚ್ 4 ರಂದು ಸೌರಭ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೇಹವನ್ನು ತುಂಡರಿಸಿ ಸೀಮೆಂಟ್ ಬಳಸಿ ಡ್ರಮ್‌ನಲ್ಲಿ ಮುಚ್ಚಲಾಗಿತ್ತು. ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಈ ಘಟನೆಯ ನಂತರ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.

ಮಾರ್ಚ್ 18 ರಂದು ಪೊಲೀಸರಿಗೆ ಈ ವಿಷಯ ತಿಳಿದು, ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಲಾಯಿತು. ವೈದ್ಯರ ಪ್ರಕಾರ, ಉದ್ದನೆಯ ಚಾಕುವಿನ ಆಳವಾದ ಗಾಯಗಳು ಹೃದಯವನ್ನು ಭೇದಿಸಿವೆ, ಇದು ಸತತ ಮತ್ತು ಹಿಂಸಾತ್ಮಕ ದಾಳಿಯನ್ನು ಸೂಚಿಸುತ್ತದೆ. ಪೊಲೀಸ್ ವರಿಷ್ಠಾಧಿಕಾರಿ ಯುಷ್ ವಿಕ್ರಮ್ ಸಿಂಗ್ ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಿದ್ದು, “ಮುಸ್ಕಾನ್ ಸೌರಭ್ ಅವರ ಹೃದಯಕ್ಕೆ ಕ್ರೂರವಾಗಿ ಇರಿದು ಪಂಕ್ಚರ್ ಮಾಡಿದ್ದಾರೆ. ಅವರ ಕುತ್ತಿಗೆಯನ್ನು ಕತ್ತರಿಸಲಾಗಿದ್ದು ಎರಡೂ ಅಂಗೈಗಳನ್ನು ಕತ್ತರಿಸಲಾಯಿತು. ದೇಹವನ್ನು ಡ್ರಮ್‌ನಲ್ಲಿ ಇರಿಸಲು ನಾಲ್ಕು ತುಂಡುಗಳಾಗಿ ಕತ್ತರಿಸಲಾಗಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!