Author: Vidyamaana

ಫ್ಯಾನ್ ಮೇಲೆ ಸಂಗ್ರಹವಾದ ಧೂಳು, ಎಣ್ಣೆಯ ಜಿಡ್ಡು ಸುಲಭದಲ್ಲಿ ಕ್ಲೀನ್ ಮಾಡೋದು ಹೀಗೆ ನೋಡಿ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಮನೆಗಳಲ್ಲಿ ಸ್ವಚ್ಛತಾ ಕಾರ್ಯಗಳು ಆರಂಭವಾಗುತ್ತವೆ. ಮನೆಯ ನೆಲ, ಕಿಟಕಿ, ಪರದೆ, ಪೀಠೋಪಕರಣ ಸೇರಿದಂತೆ ಪ್ರತಿಯೊಂದು ವಸ್ತುವನ್ನು ಸ್ವಚ್ಛಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ಮನೆಯ ಸೀಲಿಂಗ್ ಫ್ಯಾನ್‌ಗಳನ್ನು ಸ್ವಚ್ಛಗೊಳಿಸುವುದನ್ನು ಬಹುತೇಕರು ಮರೆತುಬಿಡುತ್ತಾರೆ. ಫ್ಯಾನ್‌ನ ಬ್ಲೇಡ್‌ಗಳ ಮೇಲೆ ಸಂಗ್ರಹವಾಗುವ…

ಕಡಬ: ಶರಣಾಗತ ನಕ್ಸಲ್ ನಾಯಕಿ ಮುಂಡಗಾರು ಲತಾ ನ್ಯಾಯಾಲಯಕ್ಕೆ ಹಾಜರು

ಸರ್ಕಾರದ ಮುಂದೆ ಶರಣಾಗತಿಯಾಗಿರುವ ಚಿಕ್ಕಮಗಳೂರಿನ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ (ಶ್ರೀಲತಾ) ಅವರನ್ನು 2018ರ ಹಳೆಯ ಬೆದರಿಕೆ ಹಾಗೂ ದರೋಡೆ ಪ್ರಕರಣವೊಂದರ ವಿಚಾರಣೆಗಾಗಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಡಬ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಲತಾ ಅವರು 2025 ರಲ್ಲಿ ಮುಖ್ಯಮಂತ್ರಿ…

ಬೆಳ್ತಂಗಡಿ: ಆಟೋರಿಕ್ಷಾ ಹಾಗೂ ಬೈಕ್ ನಡುವೆ ಭೀಕರ ಢಿಕ್ಕಿ; ಬೈಕ್ ಸವಾರ ಸ್ವಸ್ತಿಕ್ ಮೃತ್ಯು..!!

ವೇಣೂರು ಸಮೀಪದ ಮೂಡುಕೋಡಿ ಪಂಜಲಬೈಲು ಎಂಬಲ್ಲಿ ನವೆಂಬರ್ 3ರಂದು ಸಂಜೆ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟಿದ್ದಾರೆ. ಮೃತ ಯುವಕನನ್ನು ಪೆರಾಡಿ ಗ್ರಾಮದ ನಿವಾಸಿ ಸ್ವಸ್ತಿಕ್ (26) ಎಂದು ಗುರುತಿಸಲಾಗಿದೆ.…

ಚುನಾವಣಾ ಸೋಲಿಗೆ ಯುದ್ಧವೇ ಕಾರಣ ಎಂದ ಜೆಡಿ ವ್ಯಾನ್ಸ್..!!

ಅಮೆರಿಕದಲ್ಲಿ ನಡೆದ ಅತ್ಯಂತ ಮಹತ್ವದ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಭಾರಿ ಹಿನ್ನಡೆಗೆ ಇರಾನ್ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್…

ಬ್ರಾಹ್ಮಣ ಮಹಾಸಭೆಗೆ ನಿವೇಶನ ಮಂಜೂರಾತಿಗೆ ಶಾಸಕರಿಗೆ ಮನವಿ..!!

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಭಾಭವನ ಮತ್ತು ವಿದ್ಯಾರ್ಥಿ ವಸತಿನಿಲಯ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಪುತ್ತೂರಿನಲ್ಲಿ ಒಂದು ಅಥವಾ ಎರಡು ಎಕರೆ ನಿವೇಶನ ಮಂಜೂರು ಮಾಡುವಂತೆ ಬ್ರಾಹ್ಮಣ ಸಮಾಜದ ಪ್ರಮುಖರು…

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದರೂ ಹೊಸ ರಿಜಿಸ್ಟ್ರೇಷನ್ ಬೇಡ! BH ಸೀರೀಸ್ ನಂಬರ್ ಪ್ಲೇಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ!

ಕೆಲಸ ಸಿಕ್ಕರೆ ಸಾಕು, ಊರು ಬಿಟ್ಟು ಬೇರೆ ರಾಜ್ಯಕ್ಕೆ ಹೋಗಲು ಸಿದ್ಧರಾಗುವ ಯುವಕರು ಹಲವರಿದ್ದಾರೆ. ಕೆಲವರಿಗೆ ಉದ್ಯೋಗದ ಕಾರಣಕ್ಕೆ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ರಾಜ್ಯವೇ ಬದಲಾವಣೆಯಾಗುತ್ತದೆ. ಹೀಗೆ ಬೇರೆ ರಾಜ್ಯಕ್ಕೆ ಹೋಗುವಾಗ ಮನೆ ಬದಲಿಸುವುದಷ್ಟೇ ಅಲ್ಲ, ತಮ್ಮ ಕಾರು ಅಥವಾ…

ಬೆಂಗಳೂರು: ಮಗಳ ಜೊತೆ ಸರಸವಾಡುವಾಗ ಸಿಕ್ಕಿಬಿದ್ದ ನೌಕರನ ಥಳಿಸಿ ಕೊಂದ ಉದ್ಯಮಿ ಆನಂದ್‌ ರಾಜ್ ಅರೆಸ್ಟ್!

ಮಗಳೊಂದಿಗೆ ಮನೆಯ ಕೊಠಡಿಯಲ್ಲಿದ್ದ ಕೆಲಸಗಾರನ ಮೇಲೆ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ (Crime) ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ತಂದೆಯೊಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ನಗರದ (Bengaluru) ಕೋಗಿಲು ಕ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಕೇರಳ ಮೂಲದ…

ವರ್ಣಿಕಾ–2026’ ಅಂತರ್ ಕಾಲೇಜು ಫೆಸ್ಟ್‌ನಲ್ಲಿ ಸಂತ ಫಿಲೋಮಿನಾ ಪ.ಪೂ. ಕಾಲೇಜಿಗೆ ಹಲವು ಪ್ರಶಸ್ತಿ..!!

ಪುತ್ತೂರು: ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನ. 4ರಂದು ನಡೆದ ‘ವರ್ಣಿಕಾ–2026’ ಅಂತರ್ ಕಾಲೇಜು ಮಟ್ಟದ ಫೆಸ್ಟ್‌ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತುಳು ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ…

ದೊಂತಿಲದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಢಿಕ್ಕಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಪುತ್ತೂರು: ನೆಲ್ಯಾಡಿ ಸಮೀಪದ ದೊಂತಿಲದಲ್ಲಿ ಕಾರೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಬುಧವಾರ ಸಂಭವಿಸಿದೆ. ಬಲ್ಯ ನಿವಾಸಿ ಸುಂದರ್ ಆಳ್ವ ಅವರು ನೆಲ್ಯಾಡಿಯಿಂದ ಬಲ್ಯ ಕಡೆಗೆ ನೆಲ್ಯಾಡಿ–ಬಲ್ಯ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ…

ಸುಬ್ರಹ್ಮಣ್ಯ ಕುಮಾರಧಾರಾ ಸೇತುವೆ ಬಳಿ ಮಹಿಳೆ ಆತ್ಮಹತ್ಯೆಗೆ ಯತ್ನ: ಮೊಸಳೆ ದಾಳಿ, ಪೊಲೀಸರಿಂದ ರಕ್ಷಣೆ

ಪುತ್ತೂರು: ವೈಯಕ್ತಿಕ ಕಾರಣಗಳಿಂದ ಮನನೊಂದ ಉಡುಪಿ ಮೂಲದ ಮಹಿಳೆಯೋರ್ವರು ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ.4ರ ರಾತ್ರಿ ನಡೆದಿದೆ. ಈ ವೇಳೆ ನೀರಿನಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದ್ದು, ಸಣ್ಣ ಪ್ರಮಾಣದ ಗಾಯಗಳಾಗಿವೆ. ಮಹಿಳೆಯ ಬೊಬ್ಬೆ ಕೇಳಿದ ಸಮೀಪದ…

Join WhatsApp Group
error: Content is protected !!