ಮಂಗಳೂರಿನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
‘ಆಸ್ಪತ್ರೆಗಳು ಚಿಕಿತ್ಸೆಯ ಜೊತೆಗೆ ರೋಗ ಬಾರದಂತೆ ತಡೆಗಟ್ಟುವ ಚಿಕಿತ್ಸಾ ಕೇಂದ್ರಗಳಾಗಲಿ’- ಸ್ಪೀಕರ್ ಯು ಟಿ ಖಾದರ್ ಆಶಯ
‘ಡಾ ಅಬ್ದುಲ್ ಬಶೀರ್ ಅವರ ಸಾಹಸಮಯ ಬದುಕು ಯುವ ವೈದ್ಯರಿಗೆ ಸ್ಪೂರ್ತಿ’
‘ಮಂಗಳೂರು ಹೆಲ್ತ್ ಹಬ್ ಆಗಿದೆ, ಇಲ್ಲಿ ಆಸ್ಪತ್ರೆ ಪ್ರಾರಂಭಿಸಲು ಧೈರ್ಯ ಬೇಕು’ ಸಚಿವ ಡಾ. ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್
‘130 ಬೆಡ್ ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 24×7 ಆರೋಗ್ಯ ಸೇವೆಗಳು ಲಭ್ಯ’- ಡಾ. ಅಬ್ದುಲ್ ಬಶೀರ್ ವಿ.ಕೆ.
ಮಂಗಳೂರು : ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆಯ ಕೇಂದ್ರಗಳಾಗಿರಬಹುದು. ಆದರೆ ಅವುಗಳು ರೋಗ ಬಾರದಂತೆ ತಡೆಗಟ್ಟುವ ಚಿಕಿತ್ಸಾ ಕೇಂದ್ರವೂ ಆಗಬೇಕಾಗಿದೆ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.ನಗರದ ಪಡೀಲ್-ಕೊಡಕ್ಕಲ್ನಲ್ಲಿ ನಿರ್ಮಾಣಗೊಂಡಿರುವ ಱಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ರವಿವಾರ ಉದ್ಘಾಟಿಸಿ…
