
ಸುಳ್ಯ : ಮೂಲತಃ ಕೇರಳ ವಯನಾಡ್ ನಿವಾಸಿ ಸುಳ್ಯದಲ್ಲಿ ಹಲವಾರು ವರ್ಷದಿಂದ ಪ್ಲಂಬರ್ ವೃತ್ತಿ ನಿರ್ವಹಿಸುತ್ತಿದ್ದ ಬ್ಯಾಡ್ಮಿಂಟನ್ ಆಟಗಾರ ಸಲೀತ್ ಅಹಮ್ಮದ್ (38) ನ. 01 ರಂದು ರಾತ್ರಿ ಬ್ಯಾಡ್ಮಿಂಟನ್ ಆಟದ ನಂತರ ಆಯಾಸ ಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದು ತರುವ ಸಂದರ್ಭದಲ್ಲಿ ಆಸ್ಪತ್ರೆ ದಾರಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರು ಪತ್ನಿ ಸಾಹಿನ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಹುಟ್ಟೂರಾದ ವಯನಾಡ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.






