ಸ್ವತಃ ಮಗುವಿಗೆ ಜನ್ಮ ನೀಡಿದ ಪೋಷಕರೇ ಏಳು ದಿನದ ಮಗುವನ್ನು ಸೇತುವೆಯಿಂದ ಎಸೆದು ಕೊಲ್ಲಲು ಪ್ರಯತ್ನಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಬೆಳಕಿಗೆ ಬಂದಿದೆ.
ಈ ಮಗುವಿನ ಪೋಷಕರು ಈ ರೀತಿ ಕೊಲ್ಲಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.ಆದ್ರೆ ಪವಾಡ ಸದೃಶ್ಯ ಎಂಬಂತೆ ಅದೃಷ್ಟವಶಾತ್ ಮಗು ಬದುಕುಳಿದಿದೆ.
ಪೋಷಕರು ಮಗುವನ್ನು ಸೇತುವೆಯ ಮೇಲಿಂದ ಬಿಸಾಡಿದ ನಂತರ ಮಗು ಕೆಳಗೆ ಬೀಳದೆ ಬದಲಾಗಿ ಮರದ ಮೇಲೆ ಸಿಲುಕಿಕೊಂಡಿರುವುದು ಪತ್ತೆಯಾಗಿದೆ.
ಆದ್ರೆ ಮಗುವಿನ ಬೆನ್ನಿನ ಮೇಲೆ ತೀವ್ರವಾದ ಪ್ರಾಣಿ ಕಡಿತ ಸೇರಿದಂತೆ ಕನಿಷ್ಠ 50 ಗಾಯಗಳು ಮಗುವಿನ ದೇಹದ ಮೇಲೆ ಕಂಡುಬಂದಿದ್ದು ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಯಾವುದೇ ಭರವಸೆ ನೀಡಿಲ್ಲ.