ಸಂತ ಫಿಲೋಮಿನಾ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ
‘ಗಾಂಧೀಜಿಯವರ ಸರಳ ಜೀವನ ನಮಗೆಲ್ಲಾ ಆದರ್ಶ’
‘ಲಾಲ್ ಬಹದ್ದೂರ್ ಶಾಸ್ತ್ರಿ ಸಮರ್ಪಣಾ ಮನೋಭಾವದ ನಾಯಕ’
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆಂಟನಿ ಪ್ರಕಾಶ್ ಮೊಂತೇರೋ ಅಭಿಪ್ರಾಯ
ಪುತ್ತೂರು: “ಗಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಸಮಾನತೆ ಹಾಗೂ ಸಾಮರಸ್ಯ ತತ್ತ್ವಗಳು ಸಾರ್ವಕಾಲಿಕವಾಗಿವೆ. ಗಾಂಧೀಜಿಯವರು ನಡೆಸಿದ ಸರಳ ಜೀವನ ನಮಗೆಲ್ಲ ದಾರಿದೀಪ. ಹಿಂಸೆ, ವಿಭಜನೆ, ಸಂಘರ್ಷಗಳೇ ಅಧಿಕವಾಗಿರುವ ಈ ಕಾಲಘಟ್ಟದಲ್ಲಿ ನಿಜವಾದ ಶಕ್ತಿಯು ಆಕ್ರಮಣಶೀಲತೆಯಲ್ಲಿಲ್ಲ ಬದಲಾಗಿ ಶಾಂತಿ, ಸಹನೆ ಹಾಗೂ ಸಹಾನುಭೂತಿಯಲ್ಲಿದೆ…