Category: ಕ್ರೈಂ

ಮಂಗಳೂರು:ವೀಸಾ ಕೊಡಿಸುವ ಹೆಸರಿನಲ್ಲಿ ಮೋಸ – ಕಾವೂರು ಪೊಲೀಸರು ಇಬ್ಬರ ಬಂಧನ..!!

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿತರು ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಜನರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿ,…

ಪುತ್ತೂರು–ಕಾಣಿಯೂರು ಬಸ್‌ನಲ್ಲಿ ಚಿನ್ನದ ಸರ ಕಳ್ಳತನ..!!

ಪುತ್ತೂರು: ಕಡಬ ತಾಲೂಕಿನ ಕಾಣಿಯೂರಿನ ಮಹಿಳೆಯೊಬ್ಬರ ಚಿನ್ನದ ಸರವನ್ನು ಪುತ್ತೂರು–ಕಾಣಿಯೂರು–ಬಾಳುಗೋಡು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕಳ್ಳರು ಎಗರಿಸಿದ ಘಟನೆ ಅ.27ರಂದು ನಡೆದಿದೆ. ಮಹಿಳೆ ಹಾಗೂ ಅವರ ಸಹೋದರಿಯರು ಅ.27ರಂದು ಸಂಜೆ 4.17ಕ್ಕೆ ಪುತ್ತೂರು ಬಸ್ ನಿಲ್ದಾಣದಿಂದ ಕಾಣಿಯೂರು–ಬಾಳುಗೋಡು ಮಾರ್ಗದ ಬಸ್ ಹತ್ತಿದ್ದರು. ಸಂಜೆ…

ಸೌಜನ್ಯ ತಾಯಿ ಸೇರಿದಂತೆ 12 ಜನರ ವಿರುದ್ಧ FIR ದಾಖಲು..! ಯಾಕೆ ಗೊತ್ತಾ..?

ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ 12 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅ.27ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅನಧಿಕೃತವಾಗಿ ಕೂಟ ಹಮ್ಮಿಕೊಂಡಿರುವ ಆರೋಪವಾಗಿದೆ. ಈ ಪ್ರಕರಣದಲ್ಲಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ…

ಬಂಟ್ವಾಳ ಫೈ ಓವರ್ ನಲ್ಲಿ ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು..!!

ಬಂಟ್ವಾಳ: ಪಾಣೆಮಂಗಳೂರು ಫೈ ಓವರ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ದುರಂತದಲ್ಲಿ ಪುತ್ತೂರಿನ ಯುವಕ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದೆ. ಮೃತ ಯುವಕನನ್ನು ಪುತ್ತೂರು ಕುದ್ಮಾರು ನಿವಾಸಿ ಕಾರ್ತಿಕ್ (24) ಎಂದು ಗುರುತಿಸಲಾಗಿದೆ. ಕಾರಿನಲ್ಲಿ…

ವಿಟ್ಲ ಹನಿ ಟ್ರ್ಯಾಪ್ ಸುಲಿಗೆ ಪ್ರಕರಣ – ಪ್ರಮುಖ ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ವಿಟ್ಲ: ಕೇರಳ ಮೂಲದ ಉದ್ಯೋಗಿಯಾಗಿರುವ ಅಶ್ರಫ್ ಎಂಬಾತನಿಗೆ ಹನಿ ಟ್ರ್ಯಾಪ್ ಮಾಡಿ ಸುಮಾರು 45 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪ್ರಮುಖ ಮೂರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.…

ಲವರ್‌ ಜೊತೆ ಲಾಡ್ಜ್‌ ನಲ್ಲಿ ಸಿಕ್ಕಿಬಿದ್ದ ಗಂಡ –  ಚಪ್ಪಲಿಯಿಂದ ಬಾರಿಸಿದ ಪತ್ನಿ! VIDEO

ವಿದ್ಯಾಮಾನ Whats App Group ಗೆ ಸೇರಲು ಕ್ಲಿಕ್ ಮಾಡಿ ಪರಸ್ತ್ರೀಯೊಡನೆ ಲಾಡ್ಜ್‌ ನಲ್ಲಿ ಸಿಕ್ಕಿಬಿದ್ದ ಗಂಡನನ್ನು ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಸತತವಾಗಿ ಚಪ್ಪಲಿಯಿಂದ ಬಾರಿಸಿರುವ ಘಟನೆ ಬೆಳಗಾವಿ( Belagavi crime) ಯಲ್ಲಿ ನಡೆದಿದೆ. ಸತತವಾಗಿ 150 ಕ್ಕೂ ಹೆಚ್ಚು ಬಾರಿ…

ಪುತ್ತೂರು :ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಊರಿನಲ್ಲಿ ದ್ವೇಷ ಭಾಷಣ: ಶಾಸಕರ ಮೌನಕ್ಕೆ ಎಸ್‌ಡಿಪಿಐ ಟೀಕೆ..!!

ಪುತ್ತೂರು: ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿಯಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅವಮಾನಕಾರಿಯಾಗಿ ಮಾತನಾಡಿ, ದ್ವೇಷ ಪ್ರಚೋದನೆಯನ್ನು ಉಂಟುಮಾಡಿದ ಆರೋಪ ಎದುರಿಸುತ್ತಿರುವ ಪ್ರಭಾಕರ ಭಟ್ ಕುರಿತಾಗಿ ಪುತ್ತೂರು ಶಾಸಕರು ಮೌನ ವಹಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪ್ರಶ್ನಿಸಿದೆ. ದ್ವೇಷ ಭಾಷಣದ…

ಬೆಳಗಾವಿ: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ 8000 ಮಹಿಳೆಯರಿಗೆ 12 ಕೋಟಿ ರೂ.ವಂಚನೆ; ಆರೋಪಿ ಪರಾರಿ

ಬೆಳಗಾವಿ: ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸುದ್ದಿಯಿಲ್ಲದೆ ಪರಾರಿಯಾಗಿದ್ದಾನೆ. ಈ ಕುರಿತು…

ಉಪ್ಪಳಿಗೆ: ದೀಪೋತ್ಸವ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ –  ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಕೋರ್ಟ್ ನಿರ್ದೇಶನ..!!

ಪುತ್ತೂರು: ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ, ಅವರನ್ನು ಬಂಧಿಸುವುದಾಗಲಿ ಅಥವಾ ಯಾವುದೇ ಬಲವಂತದ ಕ್ರಮ ಜರುಗಿಸುವುದಾಗಲಿ ಬೇಡವೆಂದು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

ಬೆಳ್ತಂಗಡಿ:ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಮಂದಿಗೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ ಎಸ್‌ಐಟಿ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಮಂದಿಗೆ ಎಸ್.ಐ.ಟಿ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ.ಧರ್ಮಸ್ಥಳ ಪ್ರಕರಣದಲ್ಲಿ ಅ.27ರಂದು ಐದು ಮಂದಿಗೆ ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ಸುಜಾತ…

Join WhatsApp Group
error: Content is protected !!