
ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಈಗಾಗಲೇ ಉಚ್ಚಾಟನೆ ಮಾಡಲಾಗಿದೆ.
ಉಚ್ಚಾಟನೆಯಾಗಿರುವ ಕುರಿತು ಎಂಎಲ್ಸಿ ಸಿ.ಟಿ.ರವಿ ಅವರು ಪರೋಕ್ಷವಾಗಿ ತಮ್ಮ ಬೇಜಾರನ್ನು ಹೊರಹಾಕಿದ್ದಾರೆ. ಯತ್ನಾಳ್ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಪಕ್ಷ ಕಟ್ಟಿದರೆ ಡ್ಯಾಮೇಜ್ ಆಗುವುದು ಖಚಿತ.
ಆದರೆ ಯಾವ ಪಕ್ಷಕ್ಕೆ ಆಗುತ್ತದೆ ಎಂಬುವುದನ್ನು ಕಾದು ನೋಡಬೇಕು. ಪರಿಣಾಮವನ್ನು ಈಗಲೇ ವಿಶ್ಲೇಷಿಸುವುದು ಕಷ್ಟ ಎಂದರು.
ರಾಜಕಾರಣದಲ್ಲಿ ಎಲ್ಲವೂ ದಿಢೀರ್ ಆಗಿ ಸಂಭವಿಸಲ್ಲ. ಎಲ್ಲವೂ ಒಂದೇ ಬಾರಿಗೆ ನಿರ್ಧರಿಸಲು ಆಗಲ್ಲ ಎಂದ ರವಿಯವರು, ಯತ್ನಾಳ್ ಯಾವ ಸಿದ್ಧಾಂತವನ್ನು ಇಟ್ಟುಕೊಂಡು ಪಕ್ಷ ಕಟ್ಟಿ ಮುಂದೆ ನಡೆಸುತ್ತಾರೆ ಎಂಬುವುದು ಬಹಳ ಮುಖ್ಯವಾಗಲಿದೆ.
ಅವರ ಪಕ್ಷದ ಸಿದ್ಧಾಂತದಿಂದ ಇತರ ಪಕ್ಷಗಳಿಗೆ ಡ್ಯಾಮೇಜ್ ಆಗುವುದು ನಿಜ. ಆದ್ರೆ ಯಾವ ಪಕ್ಷಕ್ಕೆ ಅಂತಾ ಹೇಳಲು ಈಗಲೇ ಆಗುವುದಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಹೊಸ ಪಾರ್ಟಿ ಕಟ್ಟಿ ಸಕ್ಸಸ್ ಆಗಿರೋರು ತೀರಾ ಕಡಿಮೆ. ಹೊಸ ಪಾರ್ಟಿ ಕಟ್ಟಿದರೆ ಡ್ಯಾಮೇಜ್ ಆಗೋದು ಗ್ಯಾರಂಟಿ ಎಂದು ಅಭಿಪ್ರಾಯಪಟ್ಟರು.






