

ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಯಾಣಿಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಎಪ್ರಿಲ್ 2 ರ ಮುಂಜಾನೆ ನರಿಮೊಗರು ಎಂಬಲ್ಲಿ ನಡೆದಿದ್ದು, ಮುಂಜಾನೆ ವೇಳೆ ಕರ್ತವ್ಯಕ್ಕೆ ಬಂದಿದ್ದ ರೈಲ್ವೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕನನ್ನು ರಕ್ಷಣೆ ಮಾಡಿದ್ದಾರೆ
ಒಂದು ವಾರದೊಳಗೆ ಈ ರೀತಿಯ ಎರಡನೇ ಪ್ರಕರಣ ಇದಾಗಿದೆ.
ಗಾಯಾಳು ವ್ಯಕ್ತಿಯನ್ನು ಸಕಲೇಶಪುರ ನಿವಾಸಿ ಉಮೇಶ್ ಯಾನೆ ಮಹೇಶ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊಗುತ್ತಿದ್ದ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಸಕಲೇಶಪುರಕ್ಕೆ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ನರಿಮೊಗರು ಬಳಿ ಅವರು ರೈಲಿನಿಂದ ಆಯ ತಪ್ಪಿ ಕೆಳ ಬಿದ್ದರು. ತೀವ್ರ ಗಾಯಗೊಂಡ ಅವರು ರೈಲ್ವೇ ಹಳಿಯ ಪಕ್ಕದಲ್ಲಿನ ಕಲ್ಲಿನ ಕಂಬದ ಹತ್ತಿರವೇ ಬಿದ್ದಿದ್ದರು. ಮುಂಜಾನೆ ಕಬಕ ಪುತ್ತೂರು ರೈಲು ನಿಲ್ದಾಣದ ಬೀಟ್ ಸಿಬಂದಿ ರಾಜೇಶ್ ಕೆದಾRರ್ ಅವರು ಹಳಿಯನ್ನು ಪರಿಶೀಲಿಸುತ್ತಾ ನಡೆದಾಗ ಹತ್ತಿರದಲ್ಲೇ ವ್ಯಕ್ತಿ ನರಳಾಡುತ್ತಿರುವುದು ಕಾಣಿಸಿತು. ಕೂಡಲೇ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಸ್ಥಳೀಯರಿಬ್ಬರ ಸಹಾಯದಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೇ ರೀತಿ ಮಾರ್ಚ್ 25 ರಂದು ಯುವಕನೊಬ್ಬ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಿಂದ ಬಿದ್ದು 15 ಗಂಟೆಗಳ ಬಳಿ ಪತ್ತೆಯಾಗಿದ್ದ, ರಾತ್ರಿ ವೇಳೆ ಮದ್ಯ ಸೇವಿಸಿ ರೈಲಿನ ಸಂಚರಿಸುವ ಪ್ರಯಾಣಿಕರು, ಬಾಗಿಲ ಬಳಿ ನಿಂತ ವೇಳೆ ಈ ರೀತಿಯಾಗಿ ಬಿದ್ದಿರುವ ಸಾದ್ಯತೆ ಇದೆ ಎಂದು ಹೇಳಲಾಗಿದೆ.
