ಕುಡಿದ ಮತ್ತಿನಲ್ಲಿ ಅಪರಿಚಿತ ವ್ಯಕ್ತಿಯೋರ್ವ ನಾನು ಅಜ್ಮಲ್ ಕಸಬ್ ನ ಸಹೋದರ, ಇನ್ನು ಸ್ವಲ್ಪ ಹೊತ್ತಿನಲ್ಲಿ ಇಡೀ ಮುಂಬೈ ಪೊಲೀಸ್ ಠಾಣೆಯ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಪಿಯೂಷ್ ಶಿವನಾಥ್ ಶುಕ್ಲಾ (28) ಎಂದು ಗುರುತಿಸಲಾಗಿದೆ

ಏಪ್ರಿಲ್ 1 ರಂದು ಬೆಳಗ್ಗಿನ ಜವ 1:07 ಗಂಟೆಯ ಸುಮಾರಿಗೆ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 100 ಕ್ಕೆ ಬೆದರಿಕೆ ಕರೆ ಬಂದಿತ್ತು.

ಈ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕರೆಗೆ ಉತ್ತರಿಸಿದ್ದಾರೆ. ಈ ವೇಳೆ ವ್ಯಕ್ತಿ ಮುಂಬೈ ಪೊಲೀಸರನ್ನು ನಿಂದಿಸಿ ನಾನು ಅಜ್ಮಲ್ ಕಸಬ್‌ನ ಸಹೋದರ ಇನ್ನು ಕೆಲವೇ ನಿಮಿಷಗಳಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಇಡೀ ಪಡೆಗೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ..

ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ವೇಳೆ ಕರೆಗೆ ಬಳಸಿದ ಮೊಬೈಲ್ ನಂಬರ್ ಅನ್ನು ಟ್ರೇಸ್ ಮಾಡಿದಾಗ ಮುಲುಂಡ್ ರೈಲ್ವೆ ನಿಲ್ದಾಣ ಪ್ರದೇಶದಿಂದ ಕರೆ ಮಾಡಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ಬಂಧಿಸಲು ತೆರಳಿದ್ದಾರೆ.

ಅದರಂತೆ ಬೆದರಿಕೆ ಹಾಕಿದ ಆರೋಪಿ ಶಿವನಾಥ್ ಶುಕ್ಲಾನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿಯು ಕಂಠಪೂರ್ತಿ ಕುಡಿದು ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 1 ರಲ್ಲಿ ಮಲಗಿದ್ದ, ಇದನ್ನು ಗಮನಿಸಿದ ಆರ್‌ಪಿಎಫ್ ಅಧಿಕಾರಿಯೊಬ್ಬರು ಅವರನ್ನು ಹೊರಹೋಗುವಂತೆ ಆಗ್ರಹಿಸಿದ್ದಾರೆ.

ಮಲಗಿದ್ದವನನ್ನು ಹೊರಗೆ ಕಲಿಸಿದ ಸಿಟ್ಟಿನಲ್ಲಿ ರೈಲ್ವೇ ನಿಲ್ದಾಣದಿಂದ ಹೊರಗೆ ಬಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪ್ರಕರಣದ ಸಂಬಂಧ ತನಿಖೆ ನಡೆಸಲಾಗುತ್ತಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!