ಹೊಸ ಹಣಕಾಸು ವರ್ಷ ಆರಂಭಗೊಂಡು ಕೇವಲ ಬೆರಳೆಣಿಕೆ ದಿನಗಳು ಕಳೆದಿದ್ದು, ಆರಂಭದಲ್ಲೇ ಕಠಿಣ ಸಂಚಾರ ನಿಯಮಗಳನ್ನು ಜಾರಿಗೆ ತರುವ ಮೂಲಕ ಹಳೆ ಬಾಕಿಗಳ ವಸೂಲಿಗೆ ರಾಜ್ಯ ಸರ್ಕಾರ ಮುಂದಾಗಿದೆ ಒಂದುವೇಳೆ ದೀರ್ಘಕಾಲಕ್ಕೆ ದಂಡ ಬಾಕಿಯಿದ್ದರೆ ಏಪ್ರಿಲ್ 1 ರಿಂದ ನಿಮ್ಮ ಡ್ರೈವಿಂಗ್ ಕಿಸೆನ್ಸ್ ರದ್ದಾಗಲಿದೆ.
ಈ ಹೊಸ ನಿಯಮಗಳ ಪ್ರಕಾರ ಇ-ಚಲನ್‌ಗಳನ್ನು ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳುವಂತಿಲ್ಲ, ಹಾಗೇನಾದರೂ ಬಾಕಿ ಉಳಿಸಿಕೊಂಡಲ್ಲಿ ಆ ಚಾಲಕರ ಲೈಸೆನ್ಸ್ ಮೂರು ತಿಂಗಳವರೆಗೆ ಅಮಾನತುಗೊಳಿಸುವ ಕ್ರಮಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಲಿದ್ದಾರೆ.
ಇನ್ನು ಒಂದು ವರ್ಷದಲ್ಲಿ ಮೂರು ಬಾರಿ ಸಿಗ್ನಲ್ ಜಂಪ್ ಅಥವಾ ಅಜಾಗರೂಕ ಚಾಲನೆ ಮಾಡಿ ನಿಯಮ ಉಲ್ಲಂಘನೆ ಮಾಡಿದ್ರೆ ಆಗ ಆ ವ್ಯಕ್ತಿಯ ಮೂರು ತಿಂಗಳ ಲೈಸೆನ್ಸ್ ರದ್ದು ಮಾಡಲಾಗುತ್ತದೆ.ರಾಜ್ಯದಲ್ಲಿ ದಂಡ ವಸೂಲಾತಿ ದರ ಕಡಿಮೆ ಇರುವ ಕಾರಣ ಕೇವಲ ಶೇ. 40 ಮಾತ್ರ ಸಂಗ್ರಹವಾಗುತ್ತಿದೆ. ಹೀಗಾಗಿ ಹೊಸ ಹಣಕಾಸು ವರ್ಷದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ














