

ಇಂಡಿಗೋ ವಿಮಾನ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಗಗನಸಖಿಯೊಬ್ಬರು ಮಗುವಿನ ಚಿನ್ನದ ಚೈನ್ ಕಳ್ಳತನ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ದೇವನಹಳ್ಳಿ ಏರ್ ಪೋರ್ಟ್ ಠಾಣೆಯಲ್ಲಿ ಇಂಡಿಗೋ ವಿಮಾನದ ಗಗನಸಖಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.
ಗಗನಸಖಿ ಅದಿತಿ ಅಶ್ವಿನಿ ಶರ್ಮಾ ವಿರುದ್ಧ ಸರಗಳ್ಳತನ ಆರೋಪ ಮಾಡಿರುವ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.
ಏ.1ರಂದು ತ್ರಿವೇಂದ್ರಮ್ ನಿಂದ ಬೆಂಗಳೂರಿಗೆ ಮಹಿಳೆಯೊಬ್ಬರು ಇಬ್ಬರು ಮಕ್ಕಳ ಜೊತೆ ಇಂಡಿಗೋ ಫ್ಲೈಟ್ ನಲ್ಲಿ ಆಗಮಿಸಿದ್ದಾರೆ. ಮಗು ಅಳುತ್ತಿದ್ದ ಕಾರಣಕ್ಕೆ ಗಗನಸಖಿ ಅದಿತಿ ಅಶ್ವಿನಿ ಮಗುವನ್ನು ಎತ್ತಿಕೊಂಡಿದ್ದರು. ಈ ವೇಳೆ ಗಗನಸಖಿ ಮಗು ಕರೆದುಕೊಂಡು ವಾಶ್ ರೂಂ ಗೆ ಹೋಗಿದ್ದು, ಅಲ್ಲಿ ಮಗುವಿನ ಕತ್ತಿನಲ್ಲಿದ್ದ ಚೈನ್ ಕದ್ದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಗನಸಖಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.
