

ಪ್ರಿಯಕರನ ಜೊತೆ ದೂರವಿರುವಂತೆ ಬುದ್ಧಿ ಮಾತು ಕೇಳಿದ್ದ ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡುವಂತೆ ಸುಪಾರಿ ನೀಡಿದ್ದಲ್ಲದೆ, ಹತ್ಯೆಯ ದೃಶ್ಯವನ್ನು ವೀಡಿಯೋ ಕರೆ ಮೂಲಕ ದೃಢಪಡಿಸಿಕೊಂಡಿದ್ದ ಐನಾತಿ ಪತ್ನಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪಾಟೀಲ್ (47) ಎಂಬುವವರನ್ನು ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧಕ್ಕೆ ಪತಿ ಅಡ್ಡ ಬಂದಿದ್ದಕ್ಕೆ ಲವರ್ಗೆ ಕೊಲೆಗೆ ಸುಪಾರಿ ನೀಡಿದ್ದಾಗಿ ಪತ್ನಿ ಶೈಲಾ ಪಾಟೀಲ್ ಎಂಬಾಕೆ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.
ಕಳೆದ 6 ತಿಂಗಳ ಹಿಂದೆ ಶೈಲಾಳ ಅಕ್ರಮ ಸಂಬಂಧದ ಶಿವನಗೌಡನಿಗೆ ರುದ್ರಪ್ಪ ಹೊಸೆಟ್ಟಿ ಎಂಬುವನ ಜೊತೆ ಪತ್ನಿ ಅನೈತಿಕ ಸಂಬಂಧ ಇತ್ತು ಎಂಬ ಸಂಗತಿ ಗೊತ್ತಾಗಿತ್ತು. ಆತನಿಂದ ದೂರ ಇರುವಂತೆ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಶೈಲಾ ಗಂಡನನ್ನೇ ಕೊಂದರೆ ನಮ್ಮಿಬ್ಬರ ಪ್ರೀತಿಗೆ ಯಾರೂ ಅಡ್ಡ ಬರುವುದಿಲ್ಲವೆಂದು ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಲ್ಲಿಸಲು ಸಂಚು ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ.
ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಶಿವನಗೌಡನ ತಲೆ ಮೇಲೆ ಆರೋಪಿ ರುದ್ರಪ್ಪ ಕಲ್ಲು ಎತ್ತಿ ಹಾಕಿ ಏ.2ರಂದು ಕೊಲೆ ಮಾಡಿದ್ದ. ಆ ಸಂದರ್ಭದಲ್ಲಿ ಶೈಲಾ ಕೊಲೆಯ ವೇಳೆ ವೀಡಿಯೋ ಕಾಲ್ ಮೂಲಕ ಗಂಡನ ಸಾವಿನ ಕೊನೆಯ ಕ್ಷಣವನ್ನೂ ನೋಡಿದ್ದಳು. ಗಂಡನ ಹತ್ಯೆಯ ಬಳಿಕ ಗೋಳಾಡಿ ಕಣ್ಣೀರಿಟ್ಟಿದ್ದು ನಾಟಕವೆಂಬುವುದು ಖಾಕಿ ತನಿಖೆಯಿಂದ ಬಯಲಾಗಿದೆ.
