
ಬಳ್ಳಾರಿಯ ಹೋಟೆಲ್ ಬಾಲಾ ರಿಜೆನ್ಸಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ದೂರು ಹಿನ್ನೆಲೆಯಲ್ಲಿ ಸ್ಪಾದಲ್ಲಿ ವೇಶ್ಯೆವಾಟಿಕೆ ನಡೆಯುತ್ತಿದ್ದ ವೇಳೆ ಎಸ್ಪಿ ಶೋಭಾರಣಿ ನೇತೃತ್ವದಲ್ಲಿ ಪೆÇಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ದಾಳಿಯಲ್ಲಿ ನಾಲ್ವರನ್ನು ಬಂಧಿಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಸ್ಪಾ ನಡೆಸುತ್ತಿದ್ದ ಬಿ.ಎಂಡಿ ಮತೀಲ್, ಮೈನಜ್ ಬಂಧಿತ ಆರೋಪಿಗಳಾಗಿದ್ದಾರೆ. ಮುಂಬಯಿ, ಗಂಗಾವತಿ ಮೂಲದ ಮಹಿಳೆಯರನ್ನು ಪೊಲೀಸ್ ರು ರಕ್ಷಣೆ ಮಾಡಿದ್ದಾರೆ.
ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.






