ಪುತ್ತೂರು :ಇಲ್ಲಿನ ಪುತ್ತೂರು ಖಾಸಗಿ ಬಸ್ ನಿಲ್ದಾಣ ಬಳಿ ಕಾರು ಮತ್ತು ಮೊಟ್ಟೆ ಲೈನ್ ಸೆಲ್ ಮಾಡುವ ಟೆಂಪೋ ನಡುವೆ ಅಪಘಾತ ಎ. 6ರಂದು ನಡೆದಿದೆ.
ಬ್ರಿಝ ಕಾರು ಮತ್ತು ಟೆಂಪೋ ನಡುವೆ ಡಿಕ್ಕಿಯಾಗಿದ್ದು ಪರಿಣಾಮ ಟೆಂಪೋ ಚಾಲಕನ ನಿಯಂತ್ರ ತಪ್ಪಿ ಖಾಸಗಿ ಬಸ್ ನಿಲ್ದಾಣ ದಿಂದ ಎಪಿಎಂಸಿ ಸಂಪರ್ಕ ರಸ್ತೆ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ನುಗ್ಗಿದೆ.
ಘಟನೆ ಪರಿಣಾಮ ವಾಹನಗಳಿಗೆ ಮತ್ತು ಅಂಗಡಿಗೆ ಹಾನಿಯಾಗಿದ್ದು ಚಾಲಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.














