
ಅಕ್ರಮ ಸಂಬಂಧಕ್ಕೆ ತನ್ನ ಗಂಡನನ್ನು ಪ್ರಿಯಕರನಿಂದಲೇ ಸುಪಾರಿ ಕೊಡಿಸಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಡೆದಿದೆ. ಪತಿಯ ಸಾವಿನ ನಂತರವೂ ಮಳ್ಳಿ ಮಳ್ಳಿ ಮಂಚಕ್ಕೆ ಕಾಲು ಎಷ್ಟು ಎಂದರೆ ಮೂರು ಮತ್ತೊಂದು ಎಂಬಂತೆ ಶವದ ಮುಂದೆ ಗೋಳಾಡಿ, ಕಣ್ಣೀರು ಹಾಕಿದ ಕೇಡಿ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಏಪ್ರಿಲ್ 4ರಂದು ಬಳ್ಳಾರಿ ನಗರದ ಕಣೇಕಲ್ ರಸ್ತೆಯ ರಾಣಿತೋಟದ ಬಳಿ ಪತಿ ವೆಂಕಟೇಶ್ ಎಂಬಾತನ ಕೊಲೆ ಆಗಿತ್ತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಥೇಟ್ ಸಿನಿಮಾ ಶೈಲಿನಲ್ಲೇ ರಿಯಲ್ ಲೈಫ್ ನಲ್ಲಿ ಪತ್ನಿ ನೀಲವೇಣಿ ಪೊಲೀಸರ ಮುಂದೆ ನಟನೆ ಮಾಡಿದ್ದಾಳೆ. ಗಂಡನ ಸಾವಿಗೆ ಮೊಸಳೆ ಕಣ್ಣೀರು ಹಾಕಿದ್ದಾಳೆ. ಆದರೆ ಪೊಲೀಸರ ಮುಂದೆ ಇವಳ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಖಾಕಿ ಪಡೆಗೆ ಪತ್ನಿಯ ಕಿಲ್ಲರ್ ಆಟ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಗ ಪೊಲೀಸ್ ಶೈಲಿನಲ್ಲಿ ವಿಚಾರಿಸಿದಾಗ ನೀಲವೇಣಿ ಬಾಯಿ ಬಿಟ್ಟಿದ್ದಾಳೆ. ತನ್ನ ಪ್ರಿಯಕರ ಆನಂದ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ನೀಲವೇಣಿ ಎಲ್ಲಿ ನಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೋ ಎಂದು ಆನಂದ್‌ಗೆ ಸುಪಾರಿ ಕೊಟ್ಟಿದ್ದಾಳೆ.
ಮೊದಲು ಪತಿಯನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ 11 ಜನ ಏಕಾಏಕಿ ವೆಂಕಟೇಶ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈಗ ಅಷ್ಟೂ ಜನ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾರೆ.






