ಪುತ್ತೂರು :ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ  ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ರವಿವಾರ ಅರಸೀಕೆರೆಯಲ್ಲಿ  ಪತ್ತೆಯಾಗಿದ್ದಾನೆ.

ಕೊಡಿಪ್ಪಾಡಿ ನಿವಾಸಿ ರಝಕ್ ಮತ್ತು ಸಕೀನ ದಂಪತಿಗಳ ಪುತ್ರ ಪುತ್ತೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್(15ವ) ಎ.5 ರಂದು ನಾಪತ್ತೆ ಯಾಗಿದ್ದ.ಪೋಷಕರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದು ಪೋಷಕರಿಂದ ಮಾಹಿತಿ ಪಡೆದು ಕಾರ್ಯಾಚರಣೆಹುಡುಕಾಡುತ್ತಿದ್ದಂತೆ.  ಸಂಜೆ ಅರಸೀನಕೆರೆ ಸಮೀಪ ಈತ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಅಥವಾ 7338569609,8867261458 ಈ ಮೊಬೈಲ್ ನಂಬರ್ ಮಾಹಿತಿ ತಿಳಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!