



ಈ ಬಾರಿ ಹಜ್ ಯಾತ್ರಿಕರ ಪೈಕಿ ಭಾರತವೂ ಸೇರಿದಂತೆ 14 ದೇಶದ ಜನರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಸೌದಿ ಅರೇಬಿಯಾ ಆದೇಶ ಹೊರಡಿಸಿದೆ. ಈ ದೇಶಗಳ ಯಾತ್ರಿಕರಿಗೆ ವೀಸಾ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನ, ಬಾಂಗ್ಲಾ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸೂಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮನ್ ಮತ್ತು ಇರಾಕ್ ನಿರ್ಬಂಧಕ್ಕೊಳಗಾದ ಇತರೆ ದೇಶಗಳಾಗಿವೆ.
ಉಮ್ರಾ ಮಾತ್ರವಲ್ಲದೇ ವ್ಯಾಪಾರ ಮತ್ತು ಕುಟುಂಬಸ್ಥರ ಭೇಟಿಗೂ ಸಹ ಈ ನಿಷೇಧ ಅನ್ವಯವಾಗಲಿದ್ದು,ಏ .13 ರಿಂದ ಪ್ರಾರಂಭವಾಗುವ ಈ ನಿರ್ಬಂಧ ಅನಿರ್ದಿಷ್ಟಾವಧಿಗೆ ಮುಂದುವರೆಯಲಿದೆ.
ಸುರಕ್ಷತೆ, ಜನದಟ್ಟಣೆ ನಿರ್ವಹಣೆ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಸ್ಪಷ್ಟಪಡಿಸಿದೆ