



ಪರಸ್ಪರ ಪ್ರೀತಿಸಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮದುವೆಯಾಗಿ ಎರಡು ವಾರ ಕಳೆಯುವಷ್ಟರಲ್ಲೇ ಇಬ್ಬರ ಪ್ರೇಮ ವಿವಾಹವು ಮುರಿದುಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಾ.23ರಂದು ಪೊಲೀಸರ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿಯ ಫಸಿಹಾ (23) ಮತ್ತು ಅದೇ ಊರಿನ ನಾಗಾರ್ಜುನ (25) ಎಂಬವವರು ಯುವತಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು.
ಈ ಮದುವೆಗೆ ನಾರ್ಗಾಜುನ ಮನೆಯವರಿಂದ ಈ ಮದುವೆಗೆ ವಿರೋಧ ಇರಲಿಲ್ಲವಾದರೂ ಯುವತಿ ಮನೆಯವರು ಈ ವಿವಾಹಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇಬ್ಬರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದರು. ಆಗ ಯುವಕ ಮತ್ತು ಯುವತಿ ಮನೆಯವರಿಗೆ ಪೊಲೀಸರು ಠಾಣೆಗೆ ಕರೆಸಿ ಮಾತನಾಡಿಸಿದ್ದರು. ಯುವತಿ ತಾನು ಪ್ರೀತಿಸಿದ ಯುವಕನೇ ಬೇಕು ಎಂದು ಪೋಷಕರನ್ನು ತೊರೆದು ವಿವಾಹವಾಗಿದ್ದಳು
ಇದೀಗ ಯುವತಿಯ ತಾಯಿ ಇದೇ ಕೊರಗಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ, ಆಕೆ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು, ತನ್ನ ತವರು ಮನೆ ಸೇರಿದ್ದಾಳೆ. ಈ ಮೂಲಕ ಹದಿನೈದು ದಿನಗಳೊಳಗೆ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನ ಪ್ರೇಮ ವಿವಾಹ ಮುರಿದುಬಿದ್ದಿದೆ
