ಟೆ ಕ್ ದೈತ್ಯ ಗೂಗಲ್ ತನ್ನ ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್ ಮತ್ತು ಕ್ರೋಮ್ ಬ್ರೌಸರ್ ತಂಡಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ದೇಶದಲ್ಲಿ ಕಳೆದ ವರ್ಷ 12,000 ಉದ್ಯೋಗ ಕಡಿತದ ನಂತರ, ಇದುವರೆಗೆ ಲೇ-ಆಫ್ ಪರಿಣಾಮ ಬೀರಿರುವ ಒಟ್ಟು ಉದ್ಯೋಗಿಗಳ ಸಂಖ್ಯೆಯು ಸುಮಾರು 15,000 ಕ್ಕೆ ಏರಿದೆ ಎಂದು ವರದಿಗಳು ಸೂಚಿಸಿವೆ.

ಇದರ ನಡುವೆಯೇ ಗೂಗಲ್ ತನ್ನ 100 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ.

ಫೆಬ್ರವರಿಯಲ್ಲಿ ಗೂಗಲ್ ತನ್ನ ಕ್ಲೌಡ್ ವಿಭಾಗದಲ್ಲಿ ಸೀಮಿತ ಸಂಖ್ಯೆಯ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಮತ್ತೆ 100ಕ್ಕೂ ಹೆಚ್ಚು ಜನರಿಗೆ ಗೇಟ್ ಪಾಸ್ ನೀಡಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಧನಗಳ ತಂಡಗಳನ್ನು ಸಂಯೋಜಿಸಿದಾಗಿನಿಂದ, ನಾವು ಹೆಚ್ಚು ಚುರುಕಾಗಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವತ್ತ ಗಮನಹರಿಸಿದ್ದೇವೆ ಮತ್ತು ಇದರಲ್ಲಿ ಕೆಲವು ಉದ್ಯೋಗ ಕಡಿತಗಳು ಸೇರಿವೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!