ನಿರಂತರ ಯುದ್ದದಿಂದ ಕಂಗೆಟ್ಟಿರೋ ಉಕ್ರೇನ್ ಯುದ್ದ ಖರ್ಚು ವೆಚ್ಚ ನಿಭಾಯಿಸೋಕೆ ಹೊಸದೊಂದು ಹೆಜ್ಜೆ ಇಟ್ಟಿದೆ.

ಮೂರು ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದ್ದು, ಉಕ್ರೇನ್ ತನ್ನ ಆದಾಯದ ಬಹುಪಾಲು ಹಣವನ್ನು ಯುದ್ದಕ್ಕೆ ಖರ್ಚು ಮಾಡುತ್ತಿದೆ.

ಇದೀಗ ಉಕ್ರೇನ್‌ಗೆ ನೀಡುವ ಯುದ್ಧ ಸಾಮಗ್ರಿ ಪೂರೈಕೆಯನ್ನು ಅಮೆರಿಕ ಸ್ಥಗಿತಗೊಳಿಸಿದ್ದು, ಉಕ್ರೇನ್ ಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ. ಹೀಗಾಗಿ ಇದೀಗ ಉಕ್ರೇನ್ ತನ್ನ ಸೇನೆಯ ಖರ್ಚು ವೆಚ್ಚಗಳನ್ನು ಪೂರೈಸಲು ನೀಲಿ ಚಿತ್ರವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆಯಂತೆ.

ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದ್ದು ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಒಂದು ವೇಳೆ ಇದಕ್ಕೆ ಮಾನ್ಯತೆ ಸಿಕ್ಕಲ್ಲಿ ಇದರಿಂದ ಬರುವ ಆದಾಯವನ್ನು ಸೇನೆಗೆ ವ್ಯಯಿಸಲು ಜೆಲೆನ್ಸ್ಕಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಉಕ್ರೇನಿಯನ್ ಸಂಸತ್ತಿನ ಹಣಕಾಸು ಸಮಿತಿಯ ಉಪಾಧ್ಯಕ್ಷ ಯಾರೋಸ್ಲಾವ್ ಝೆಲೆಜ್ನಿಯಾಕ್, ಇದನ್ನು ಒಪ್ಪಿಕೊಂಡಿದ್ದಾರೆ.

ಪೋರ್ನೋಗ್ರಫಿಯನ್ನು ಅಪರಾಧ ಮುಕ್ತಗೊಳಿಸಲು ವಿವಾದಾತ್ಮಕ ಮಸೂದೆಯನ್ನು ರಚಿಸಲಾಗಿದೆ. ಇಲ್ಲಿನ ಕಾನೂನಿನ ಪ್ರಕಾರ ಕ್ರಿಮಿನಲ್ ಕೋಡ್ ಆರ್ಟಿಕಲ್ 301 ಪ್ರಕಾರ, ಅಶ್ಲೀಲ ವಸ್ತುಗಳ ಸೃಷ್ಟಿ, ವಿತರಣೆ ಮತ್ತು ಇರಿಸಿಕೊಳ್ಳುವುದು ಕಾನೂನುಬಾಹಿರ. ಇದಕ್ಕೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ನೀಡಬಹುದಾಗಿದೆ. ಈ ಕಾನೂನು ಜಾರಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಒಂದು ವೇಳೆ ಕಾನೂನು ಮಾನ್ಯತೆ ಸಿಕ್ಕಲ್ಲಿ ಉಕ್ರೇನ್ ಗೆ ವಾರ್ಷಿಕ ನೂರಾರು ಕೋಟಿ ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದ್ದು ಇದರಿಂದ 24,000 ಮಾನವ ಬಳಕೆ ಡ್ರೋನ್ಗಳನ್ನು ಖರೀದಿಸಬಹುದಾಗಿದೆಯಂತೆ.

Leave a Reply

Your email address will not be published. Required fields are marked *

Join WhatsApp Group
error: Content is protected !!